ಪ್ರಧಾನಿ ಮೋದಿ, ಕೇಂದ್ರದ ವಿರುದ್ದ ಅಕ್ರೋಶ: ಪ್ರತಿಭಟನಾನಿರತ ರೈತರನ್ನ ಬಂಧಿಸಿದ ಪೊಲೀಸರು…..

Promotion

ತುಮಕೂರು,ಜ,2,2020(www.justkannadfa.in): ಪ್ರಧಾನಿ ಮೋದಿ, ಕೇಂದ್ರದ ವಿರುದ್ದ ಘೋಷಣೆ ಕೂಗಿ  ಅಕ್ರೋಶ ವ್ಯಕ್ತಪಡಿಸಿದ ರೈತರನ್ನ ಪೊಲೀಸರು ಬಂಧಿಸಿದ್ದಾರೆ.

ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ ಪಟೇಲ್ ಸೇರಿ ಹಲವಾರು ರೈತರನ್ನು ಪೋಲಿಸರು ಬಂಧಿಸಿದ್ದಾರೆ. ತುಮಕೂರಿಗೆ ಆಗಮಿಸಿರುವ ಮೋದಿ ವಿರುದ್ಧ ರೈತರು ಗಿ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಕರ್ನಾಟಕ  ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್,  ತುಮಕೂರಿನಲ್ಲಿ ಪ್ರಧಾನಮಂತ್ರಿಯವರು ಕೃಷಿಕರ್ಮಣ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಆಗಮಿಸುತ್ತಿದ್ದು ಇದೇ ಸಂದರ್ಭದಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿದ್ದರೇ ನಮ್ಮಗಳ ಸಮಸ್ಯೆಗೆ ಪರಿಹಾರ ದೊರಕುತ್ತಿತ್ತು ಹಾಗೂ ಕಾರ್ಯಕ್ರಮಕ್ಕೆ ಸಾರ್ಥಕತೆ ಬರುತ್ತಿತ್ತು. ಬದಲಿಗೆ ನಮ್ಮಗಳನ್ನು ಬಂಧಿಸಿ ನಮ್ಮ ಧ್ವನಿ ಹತ್ತಿಕ್ಕಲು ಪೊಲೀಸರ ಮೂಲಕ ಹೊರಟಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಅನ್ನ ನೀಡುವ ಡಾ.ಸ್ವಾಮಿನಾಥನ್ ಜಾರಿಗೆ ಮುಂದಾಗಿ ಚಾಕಲೇಟ್ ಯೋಜನೆ ಬೇಡ. ದೇಶನ ಮಾರೋಕೆ ಹೊರಟ ಮೋದಿ ಎಂದು ರಾಜ್ಯ ಸರ್ಕಾರದ ಸಿಎಂ. ಹಾಗೂ ಕೇಂದ್ರ ಸರ್ಕಾರದ ವಿರುದ್ಧ ರೈತರು ಧಿಕ್ಕಾರ ಕೂಗಿದರು. ಹಸಿರು ಶಾಲು ಕಂಡರೆ ಸಾಕು ಎಳೆದು ಹಿಡಿದು ಬಂಧಿಸಿ ಸಿಕ್ಕ ಸಿಕ್ಕ ಕಡೆಗೆ ಪೋಲೀಸರು ಕರೆದೊಯ್ಯುತ್ತಿದ್ದಾರೆ. ರೈತರ ಹಕ್ಕನ್ನು ಹತ್ತಿಕ್ಕಲು ಜಿಲ್ಲಾಡಳಿತ ಕುತಂತ್ರ ಮಾಡುತ್ತಿದೆ ಎಂದು ಆರೋಪಿಸಿದರು.

Key words: outrage- against – Prime Minister Modi-Arrest- police – protesting farmers.