ನಮ್ಮದು ಜನಪರ ಸರ್ಕಾರ: ಜೆಡಿಎಸ್ ಕಾಂಗ್ರೆಸ್ ನಲ್ಲಿ ಕುಟುಂಬಕ್ಕಷ್ಟೇ ಅಧಿಕಾರ- ಸಚಿವ ಅಶ್ವಥ್ ನಾರಾಯಣ್.

Promotion

ರಾಮನಗರ,ಆಗಸ್ಟ್,9,2022(www.justkannada.in): ನಮ್ಮ ಸರ್ಕಾರ ಜನರ ಪರವಾಗಿರುವ ಸರ್ಕಾರ. ಕಾಂಗ್ರೆಸ್ ಜೆಡಿಎಸ್ ನಂತೆ ಖಾಸಗಿ ಕಂಪನಿ ಅಲ್ಲ. ಕಾಂಗ್ರೆಸ್ ಜೆಡಿಎಸ್ ನಲ್ಲಿ ಕುಂಟುಂಬಕ್ಕಷ್ಟೆ ಅಧಿಕಾರ. ಆದರೆ ಬಿಜೆಪಿಯಲ್ಲಿ ಎಲ್ಲರಿಗೂ ಅಧಿಕಾರ ಸಿಗುತ್ತದೆ ಎಂದು ಸಚಿವ ಅಶ್ವತ್ ನಾರಾಯಣ್ ಟೀಕಿಸಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ರಾಮನಗರ ಜಿಲ್ಲೆಯಲ್ಲಿ ನಾವು ಚೆನ್ನಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಜನರ ಪರವಾಗಿರುವ ಸರ್ಕಾರ. ಕಾಂಗ್ರೆಸ್ ಜೆಡಿಎಸ್ ನಂತೆ ಖಾಸಗಿ ಕಂಪನಿ ತರ ಅಲ್ಲ. ನಮ್ಮ ಪಕ್ಷದಲ್ಲಿ ಯಾರು ಏನುಬೇಕಾದರೂ ಆಗಬಹುದು. ಆದರೆ ಕಾಂಗ್ರೆಸ್, ಜೆಡಿಎಸ್ ಕುಂಟುಂಬಕ್ಕಷ್ಟೆ ಅಧಿಕಾರ ಸೋನಿಯಾ ಕಂಪನಿ, ರಾಹುಲ್ ಕಂಪನಿ ಪ್ರಿಯಾಂಕ ಕಂಪನಿ. ರಾಮನಗರದಲ್ಲಿ ಹೆಚ್ಡಿಕೆಯದ್ದು ಒಂದು ಕಂಪನಿ.  ರಾಮನಗರದಲ್ಲಿ ಎಲ್ಲಾ ತರ ಇದ್ದಾರೆ. ಬಂಡೆ ಜೊತೆ ಕುಮಾರಸ್ವಾಮಿನೂ ಇದ್ದಾರೆ ಎಂದು ವ್ಯಂಗ್ಯವಾಡಿದರು.

ಅಧೀವೇಶನ ಕರೆಯಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ಹೆಚ್.ಡಿ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಅಶ್ವಥ್ ನಾರಾಯಣ್,  ಅಧಿವೇಶನ ಇದ್ದಾಗ ಕುಮಾರಸ್ವಾಮಿ ಬರಲ್ಲ. ಎಲ್ಲಿದ್ಯಪ್ಪ ಕುಮಾರಸ್ವಾಮಿ ಅಂತ ಹುಡುಕಬೇಕು ಎಂದು ಲೇವಡಿ ಮಾಡಿದರು.

Key words: Ours -government-– people- Minister -Aswath Narayan.