ಗ್ರಾಮಸಮರಕ್ಕೆ ಸಜ್ಜು: ನಂಜನಗೂಡು ತಾಲ್ಲೂಕಿನ ಗ್ರಾ.ಪಂಗಳಿಗೆ ಆರ್.ಓ ಹಾಗೂ ಎಆರ್ ಓ ನೇಮಕ ಮಾಡಿ ಆದೇಶ…

Promotion

ಮೈಸೂರು,ನವೆಂಬರ್,18,2020(www.justkannada.in): ರಾಜ್ಯದಲ್ಲಿ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗೆ  ಸಜ್ಜಾಗುತ್ತಿದ್ದು ಈ ಮಧ್ಯೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿ ಚುನಾವಣಾ ಪ್ರಕ್ರಿಯೆ ಗರಿಗೆದರಿದೆ.kannada-journalist-media-fourth-estate-under-loss

ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ, ಕೊರೋನಾ ಹಿನ್ನೆಲೆ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಚುನಾವಣಾ ಪ್ರಕ್ರಿಯೆಗೆ ಮೈಸೂರು ಜಿಲ್ಲಾಡಳಿತ ಮುಂದಾಗಿದೆ.  ಈ ನಡುವೆ ನಂಜನಗೂಡು ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ ಆರ್.ಓ ಹಾಗೂ ಎ ಆರ್ ಓ ನೇಮಕ ಮಾಡಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ. ಡಿಸಿ ರೋಹಿಣಿ ಸಿಂಧೂರಿ ಜಿಲ್ಲಾ ಚುನಾವಣಾ ಮುಖ್ಯ ಅಧಿಕಾರಿಯಾಗಿದ್ದಾರೆ. Orders -appoint -RO and ARO-nanjanagudu- taluk- grama panchayath-DC Rohini sinduri

ಇನ್ನು ಗ್ರಾಮಪಂಚಾಯಿತಿ ಚುನಾವಣೆಗೆ ಆಯಾ ತಾಲೂಕಿನ ಅಧಿಕಾರಿಗಳನ್ನೇ ಬಳಸಲು ತೀರ್ಮಾನಿಸಿದ್ದು, ಕೊರೋನಾ ಇರುವ ಕಾರಣಕ್ಕೆ ಆಯಾ ತಾಲ್ಲೂಕು ಅಧಿಕಾರಿಗಳೇ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲು ನಿರ್ಧರಿಸಲಾಗಿದೆ. ಹೀಗಾಗಿ ನಂಜನಗೂಡು ತಾಲೂಕು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಚುನಾವಣಾಧಿಕಾರಿಗಳನ್ನ ನೇಮಕ ಮಾಡಿ ಡಿಸಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.

 

Key words: Orders -appoint -RO and ARO-nanjanagudu- taluk- grama panchayath-DC Rohini sinduri