ನೇಮಕಾತಿ ಆದೇಶ ನೀಡಿ, ಇಲ್ಲವೇ ದಯಾಮರಣ ನೀಡಿ-ಸಚಿವ ಎಸ್.ಟಿ ಸೋಮಶೇಖರ್ ಬಳಿ ಅಳಲು ತೋಡಿಕೊಂಡ ಭಾವಿ ಪಿಯು ಉಪನ್ಯಾಸಕರು…

Promotion

ಮೈಸೂರು,ಜೂ,16,2020(www.justkannada.in): ಈಗಾಗಲೇ ನೇಮಕವಾಗಿರುವ ಪಿಯು ಉಪನ್ಯಾಸಕರಿಗೆ ಇದುವರೆವಿಗೂ ನೇಮಕಾತಿ ಆದೇಶ ನೀಡದ ಹಿನ್ನೆಲೆ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಬಳಿ ಭಾವಿ ಉಪನ್ಯಾಸಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಉಪನ್ಯಾಸಕ ವೃತ್ತಿಗೆ ಆಯ್ಕೆಯಾದ ಅಭ್ಯರ್ಥಿಗಳು ಇಂದು ಸಚಿವ ಎಸ್.ಟಿ ಸೋಮಶೇಖರ್ ಅವರನ್ನ ಭೇಟಿಯಾಗಿ ನೇಮಕಾತಿ ಆದೇಶ ನೀಡುವಂತೆ ಮನವಿ ಪತ್ರ ಸಲ್ಲಿಕೆ ಮಾಡಿದರು.

2015 ರಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಿದ್ದರು. ನಾವು ಇಲ್ಲಿಯವರೆಗೂ ಖಾಸಗಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದೆವು. ಆದರೆ ಖಾಸಗಿ ಕಾಲೇಜಿನವರು ಸಹ ನಮ್ಮನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ನಮಗೆ ಸದ್ಯಕ್ಕೆ ಕೆಲಸದ ಸ್ಥಳ ಸೂಚಿಸಿ ನಮ್ಮನ್ನು ಉಪನ್ಯಾಸಕರಾಗಿ ನಿಯೋಜಿಸಿದರೆ ಸಾಕು ಎಂದು ಭಾವಿ ಉಪನ್ಯಾಸಕರು ಮನವಿ ಮಾಡಿದರು. order-appointment-euthanasia-selected-candidates-minister-st-somashekhar

ಕಾಲೇಜು ಪ್ರಾರಂಭವಾದ ಬಳಿಕವೇ ನಮಗೆ ನೇಮಕಾತಿ ಆದೇಶ ನೀಡಿದರೂ ಅಡ್ಡಿಯಿಲ್ಲ. ನಮಗೆ ಕೆಲಸವಿಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ನೇಮಕಾತಿ ಆದೇಶ ನೀಡಿ ಇಲ್ಲವೇ ದಯಾಮರಣ ನೀಡಿ ಎಂದು ಸಚಿವ ಎಸ್.ಟಿ ಸೋಮಶೇಖರ್ ಬಳಿ ತಮ್ಮ ಅಳಲು ತೋಡಿಕೊಂಡರು.

Keyw words: Order – appointment –euthanasia- Selected candidates- Minister -ST Somashekhar ..