ರಾಜ್ಯದಲ್ಲಿ ಅಪರೇಷನ್ ಕಮಲ ವಿಚಾರ: ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಪ್ರತಿಕ್ರಿಯಿಸಿದ್ದು ಹೀಗೆ…?

Promotion

ಮೈಸೂರು,ಜು,15,2019(www.justkannada.in): ಸಮ್ಮಿಶ್ರ ಸರ್ಕಾರದ  ವಿರುದ್ದ ಅತೃಪ್ತ ಶಾಸಕರು ಅಸಮಾಧಾನಗೊಂಡು  ಬಿಜೆಪಿ ಪಕ್ಷಕ್ಕೆ ಬೆಂಬಲಿಸುತ್ತಿದ್ದಾರೆ ಹೊರತು ರಾಜ್ಯದಲ್ಲಿ ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿಲ್ಲ ಎಂದು ಸಂಸದ ವಿ. ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ವಿ.ಶ್ರೀನಿವಾಸ್  ಪ್ರಸಾದ್,  ಆಡಳಿತರೂಢ ನಾಯಕರುಗಳ ಬಗ್ಗೆ ತೀವ್ರ ಅಸಮಾಧಾನ ಹೊಂದಿದ ಹಿನ್ನೆಲೆಯಲ್ಲಿ ಹಾಗೂ ಯಾವುದೇ  ಅಭಿವೃದ್ಧಿ ಆಗಿರದ  ಹಿನ್ನೆಲೆಯಲ್ಲಿ ಬೇಸತ್ತು ಸ್ವಹಿಚ್ಚೆಯಿಂದ ಅತೃಪ್ತ ಶಾಸಕರು ರಾಜೀನಾಮೆ ನೀಡುತ್ತಿದ್ದಾರೆ. ರಾಜೀನಾಮೆಗೂ  ಬಿಜೆಪಿ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಂಡತನ  ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಈಗಾಗಲೇ ಹಲವಾರು ಶಾಸಕರು ರಾಜೀನಾಮೆ ನೀಡಿದ್ದರೂ ಸಹ ವಿಶ್ವಾಸ ಮತಯಾಚನೆ ಮಾಡುತ್ತೇನೆಂದು  ಮುಂದಾಗಿದ್ದಾರೆ.ನಾಳೆ ಎಲ್ಲವೂ ನಿರ್ಧಾರಗೊಳ್ಳಲಿದೆ. ರಾಜೀನಾಮೆ ನೀಡಿರುವ ಶಾಸಕರುಗಳಲ್ಲಿ  ಐದು ಜನ ಶಾಸಕರ ರಾಜೀನಾಮೆ ಪರಿಪೂರ್ಣವಾಗಿದ್ದರೂ  ಸ್ಪೀಕರ್ ರಮೇಶ್ ಕುಮಾರ್ ಅವರು ಕಾನೂನು ಮೂಲಕ ರಾಜೀನಾಮೆಯನ್ನು ಪರಿಶೀಲಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ನಾಳೆ ತೀರ್ಪು ಹೊರಬಂದು ರಾಜ್ಯದ ರಾಜಕೀಯ ಬೆಳವಣಿಗೆಗಳು  ಅಂತ್ಯಗೊಳ್ಳುವ  ಲಕ್ಷಣಗಳಿವೆ ಎಂದು ಶ್ರೀನಿವಾಸ್ ಪ್ರಸಾದ್  ವಿಶ್ವಾಸ ವ್ಯಕ್ತಪಡಿಸಿದರು.

Key words: Operation kamala-bjp-issue-  MP- Srinivas Prasad -reaction