ಚಾಮುಂಡಿಬೆಟ್ಟದಲ್ಲಿ ಪೊಲೀಸ್ ಬಿಗಿ ಬಂದೂಬಸ್ತ್ ನಲ್ಲಿ ಪುಟ್ ಪಾತ್ ಅಂಗಡಿಗಳ ತೆರವು ಕಾರ್ಯಾಚರಣೆ…

Promotion

ಮೈಸೂರು,ಸೆ,12,2019(www.justkannada.in):  ಮೈಸೂರಿನ ಚಾಮುಂಡಿಬೆಟ್ಟದಲ್ಲಿ  ಪುಟ್ ಪಾತ್  ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಸೂಚನೆ ಮೇರೆಗೆ ಇಂದು ಮುಂಜಾನೆ  6 ಗಂಟೆಯಿಂದಲೇ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಚಾಮುಂಡಿಬೆಟ್ಟದಲ್ಲಿನ 250 ಅಂಗಡಿ ಪೈಕಿ 90ಕ್ಕೂ ಹೆಚ್ಚು ಅಂಗಡಿ ಹಾಗೂ ಮಳಿಗೆಗಳನ್ನು ತೆರವುಗೊಳಿಸಲಾಗಿದೆ.

ತಹಶಿಲ್ದಾರ್ ರಮೇಶ್ ಬಾಬು ನೇತೃತ್ವದಲ್ಲಿ ತೆರವು ಕಾರ್ಯ ನಡೆಸಲಾಗುತ್ತಿದ್ದು ಮೊದಲ ಹಂತದಲ್ಲಿ  ೯೦ ಅಂಗಡಿಗಳ ತೆರವು ಮಾಡಲಾಗಿದೆ.

ಸರ್ಕಾರಿ ಜಾಗ ಹಾಗೂ ರಸ್ತೆಯನ್ನು ಅತಿಕ್ರಮಿಸಿ ಪುಟ್ ಬಾತ್ ಅಂಗಡಿಗಳು ತಲೆ ಎತ್ತಿದ್ದವು. ಹೀಗಾಗಿ ಅಂಗಡಿಗಳನ್ನ ತೆರವುಗೊಳಿಸುವಂತೆ  ಸಚಿವ ವಿ.ಸೋಮಣ್ಣ ಸೂಚನೆ ನೀಡಿದ್ದರು. ಹೀಗಾಗಿ ಎರಡು ದಿನಗಳ ಇಂದೆಯೇ ನಡೆಯಬೇಕಿದ್ದ ತೆರೆವು ಕಾರ್ಯ ನಡೆಯಬೇಕಿತ್ತು.

ಆದರೆ ಎರಡು  ಜೆಸಿಬಿಯೊಂದಿಗೆ ನಡೆಯುತ್ತಿರುವ ಪುಟ್ ಪಾತ್ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇದಕ್ಕೆ ಪೊಲೀಸ್ ಬಿಗಿ ಬಂದೂಬಸ್ತ್  ಮಾಡಲಾಗಿದ್ದು, ಸುಮಾರು 350 ಕೆಎಸ್ಆರ್ ಪಿ ಸಿಬ್ಬಂದಿಗಳ ಭದ್ರತೆಯಲ್ಲಿ ತೆರವು ಕಾರ್ಯ ನಡೆಯುತ್ತಿದೆ.

Key words: Operation – clearance -shops –mysore- Chamundihills