ಗೋಹತ್ಯೆ ನಿಷೇಧದಿಂದ ಕಾಂಗ್ರೆಸ್ಸಿಗರಿಗೆ ಮಾತ್ರ ತೊಂದರೆ- ಸಚಿವ ಪ್ರಭು ಚೌಹಾಣ್

Promotion

ಮೈಸೂರು,ಫೆಬ್ರವರಿ,16,2021(www.justkannada.in): ಗೋಹತ್ಯೆ ನಿಷೇಧದಿಂದ ರೈತರಿಗೆ ತೊಂದರೆಯಾಗಿಲ್ಲ. ಈ ಕಾಯ್ದೆಯಿಂದ ಕಾಂಗ್ರೆಸ್ಸಿಗರಿಗೆ ಮಾತ್ರ ತೊಂದರೆಯಾಗಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಬಿ.ಚೌಹಾಣ್ ಹೇಳಿದರು.jk

ಮೈಸೂರಿನಲ್ಲಿ ಮಾತನಾಡಿದ ಪಶುಸಂಗೋಪನಾ ಸಚಿವ ಪ್ರಭು ಬಿ.ಚೌಹಾಣ್ , ಸರ್ಕಾರದ ನಿರ್ಧಾರ ಸರಿ ಇದೆ ಎಂದು ರೈತರೇ ಹೇಳ್ತಿದ್ದಾರೆ. ಈಗಾಗಲೇ ರಾಜ್ಯಪಾಲರ ಅಂಕಿತ ಆಗಿದೆ. ವಿಧಾನ ಪರಿಷತ್  ನಲ್ಲಿ ಮೂರು ಗಂಟೆ ಚರ್ಚೆ ಬಳಿಕ ಅಂಕಿತ ಆಗಿದೆ. ಕಾಂಗ್ರೆಸ್ ನವರಿಗೆ ವಿರೋಧ ಮಾಡೊದೆ ಕೆಲಸ. ರಾಜ್ಯದಲ್ಲಿ ಸಂಪೂರ್ಣವಾಗಿ ಕಸಾಯಿಖಾನೆಗಳನ್ನು ಬಂದ್ ಮಾಡ್ತಿವಿ. ಗೋಮಾತೆಯ ರಕ್ಷಣೆ ಸಂಕಲ್ಪ ಮಾಡಿದ್ದೇವೆ. ಗೋವುಗಳ ರಕ್ಷಣೆಗಾಗಿ ಖಾಸಗಿ ಗೋಶಾಲೆಗಳಿವೆ, ಮುಂದಿನ ದಿನಗಳಲ್ಲಿ ಸರ್ಕಾರದಿಂದಲೂ ಗೋಶಾಲೆ ತೆರೆಯಲು ಚಿಂತಿಸಿದ್ದೇವೆ ಎಂದರು.only-trouble-congress-ban-minister-prabhu-chauhan-mysore

ಮೃಗಾಲಯದ ಪ್ರಾಣಿಗಳಿಗೆ ಆಹಾರದ ಕೊರತೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಪ್ರಭು ಚೌಹಾಣ್,  ಈ ಬಗ್ಗೆ ಮೃಗಾಲಯದಿಂದ ಯಾವುದೇ ಪತ್ರ ಬಂದಿಲ್ಲ. ಇಷ್ಟುದಿನ ಯಾವುದೇ ರೀತಿಯ ಆಹಾರದ ಕೊರತೆ ಆಗಿಲ್ಲ. ಹಾಗೇನಾದರೂ ಸಮಸ್ಯೆಯಾದ್ರೆ ಪರ್ಯಾಯ ವ್ಯವಸ್ಥೆ ಮಾಡ್ತಿವಿ ಎಂದು ತಿಳಿಸಿದರು.

Key words: only -trouble – congress– ban –  Minister -Prabhu Chauhan-mysore