ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಆನ್ ಲೈನ್ ಉದ್ಯೋಗ ಮೇಳ ಆಯೋಜನೆ

Promotion

ಮೈಸೂರು, ಏಪ್ರಿಲ್ 16, 2023 (www.justkannada.in): ಕರ್ನಾಟಕ ರಾಜ್ಯ ಮುಕ್ತ ವಿವಿ ಆನ್ ಲೈನ್ ಉದ್ಯೋಗ ಮೇಳ ಆಯೋಜನೆ ಮಾಡಿದ್ದು, ಆಸಕ್ತರು ಭಾಗಿಯಾಗಬಹುದಾಗಿದೆ.

ಏ. 30 ರವರೆಗೆ ಆನ್ ಲೈನ್ ಉದ್ಯೋಗ ಮೇಳ ನಡೆಯಲಿದ್ದು, ಆಸಕ್ತರು ಇದರ ಉಪಯೋಗ ಪಡೆಯಬಹುದಾಗಿದೆ ಎಂದು  ಮುಕ್ತ ವಿವಿ ಕುಲಪತಿ ಪ್ರೊ ಶರಣಪ್ಪ ವಿ ಹಲಸೆ ಮಾಹಿತಿ ನೀಡಿದ್ದಾರೆ.

ಉದ್ಯೋಗ ಮೇಳದಲ್ಲಿ 10 ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಲಿದೆ, 2000 ಕ್ಕೂ ಹೆಚ್ಚು ಉದ್ಯೋಗ ಸಿಗಲಿದೆ ಎಂದು ಪ್ರೊ ಶರಣಪ್ಪ ವಿ ಹಲಸೆ ತಿಳಿಸಿದ್ದಾರೆ.

ಬಿ,ಕಾ , ಎಂಕಾಂ, ಎಂಬಿಎ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದ್ದು, ಆಸಕ್ತರು ಮೊಬೈಲ್ ನಲ್ಲಿ ಪ್ರೊಪ್ರೈಲ್ ಇನ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದು. ದಾಖಲೆಗಳನ್ನು ಪರಿಶೀಲಿಸಿ ಅರ್ಹರಿಗೆ ಸಂದರ್ಶನ ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 9513373737 ಸಂಪರ್ಕಿಸಬಹುದಾಗಿದೆ.