ಹಾಲು ಮಾರಿ ಸಂಪಾದನೆಯಲ್ಲಿ ಬದುಕುತ್ತಿದ್ದ ವೃದ್ಧೆಯ ಅಕೌಂಟ್ ಗೆ ಕನ್ನ ಹಾಕಿದ ಖದೀಮನ ಬಂಧನ.

ಮೈಸೂರು,ಫೆಬ್ರವರಿ,25,2022(www.justkannada.in): ಹಾಲು ಮಾರಿ ಸಂಪಾದನೆಯಲ್ಲಿ ಬದುಕುತ್ತಿದ್ದ ವೃದ್ಧೆಯ ಅಕೌಂಟ್ ಗೆ ಕನ್ನ ಹಾಕಿದ ಖದೀಮನನ್ನ ಮೈಸೂರಿನ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ.

ಸಾಲ ಪಡೆಯುವ ಕಾರ್ಡ್ ಮಾಡಿಕೊಡುವುದಾಗಿ ನಂಬಿಸಿ. ಬ್ಯಾಂಕ್ ಅಕೌಂಟ್ ನಂಬರ್ ಹೆಬ್ಬೆರಳು ಗುರುತು ಪಡೆದು ವೃದ್ಧೆಯ ಅಕೌಂಟ್ ನಲ್ಲಿದ್ಧ ಹಣಕ್ಕೆ ಕನ್ನ ಹಾಕಿದ್ದು, ವಂಚನೆಯ ಆರೋಪಿಯನ್ನ ಸೈಬರ್ ಕ್ರೈಮ್  ಪೊಲೀಸರು ಬಂದಿಸಿದ್ದಾರೆ. ಬಂಧಿತ ಆರೋಪಿ ಹಿಂದೆ ಬ್ಯಾಂಕ್ ನಲ್ಲಿ ಉದ್ಯೊಗದಲ್ಲಿದ್ದ ಎನ್ನಲಾಗಿದೆ.

ಪ್ರಕರಣ ಕುರಿತು ಮಾಹಿತಿ ನೀಡಿದ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್, ವೃದ್ಧೆ ಮನೆಯಲ್ಲಿ ಇರುವಾಗ ವ್ಯಕ್ತಿಯೊಬ್ಬ ಬಂದು ನಿಮಗೆ ಕಾರ್ಡ್ ಮಾಡಿಕೊಡುತ್ತೇನೆ ಅದರಿಂದ ಸಾಲ ತೆಗೆದುಕೊಳ್ಳಬಹುದು ಎಂದು ನಂಬಿಸಿದ್ದಾನೆ. ವೃದ್ಧೆಯ ಬ್ಯಾಂಕ್ ಅಕೌಂಟ್ ನಲ್ಲಿ 4100ರೂ ಹಣ ಇಲ್ಲದಿರುವುದಾಗಿ ತಿಳಿದಿದೆ. ಬಳಿಕ ವೃದ್ಧೆಯಿಂದ ಪೊಲೀಸರಿಗೆ ದೂರು ನೀಡಲಾಗಿದ್ದು, ಆರೋಪಿಯಿಂದ ಹಲವಾರು ಜನರಿಗೆ ವಂಚನೆ ಮಾಡಿರುವ ಬಗ್ಗೆ ತನಿಖೆ ನಂತರ ಬೆಳಕಿಗೆ ಬಂದಿದೆ. ಹಳ್ಳಿ ಹಳ್ಳಿಗಳಿಗೆ ತೆರಳಿ ವಯಸ್ಸಾದವರನ್ನ ಭೇಟಿ ಮಾಡಿ ಸುಳ್ಳು ಹೇಳಿ ಮಾಹಿತಿಗಳನ್ನ ಪಡೆದು ಮೋಸ ಮಾಡುತ್ತಿದ್ದ. ಬಂಧಿತನ ಮೇಲೆ ಎರಡು ಪ್ರಕರಣಗಳು ದಾಖಲಾಗಿದೆ ಈ ಹಿಂದೆ ಬ್ಯಾಂಕ್ ನಲ್ಲಿ ಕೆಲಸ ಮಾಡಿ ಅನುಭವವಿರುವ ಆರೋಪಿ ಎಂದು ತಿಳಿಸಿದರು.ganja peddlers arrested by mysore police

ಆನ್ ಲೈನ್ ಮೂಲಕ ಹಣ ವಂಚನೆ ಪ್ರಕರಣ ಹೆಚ್ಚಾಗುತ್ತಿವೆ. ಪ್ರಕರಣಗಳು  ನಡೆದ 2 ಗಂಟೆಗಳಲ್ಲೇ  ಪೊಲೀಸರಿಗೆ ದೂರು ನೀಡಿ. ಇಲ್ಲವೇ 1930ಗೆ ಕೂಡಲೇ ಕರೆ ಮಾಡಿ ಮಾಹಿತಿ ತಿಳಿಸಿ ಎಂದು  ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಸಾರ್ವಜನಿಕರಲ್ಲಿ  ಮನವಿ ಮಾಡಿದರು.

ಇತ್ತೀಚಿಗೆ ಆನ್ ಲೈನ್ ಮೂಲಕ ವಂಚನೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ ಘಟನೆ ಜರುಗಿದ ಕೂಡಲೇ ಗೋಲ್ಡ್ ಅವರ್ಸ್ ನಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ. ವಂಚನೆ ಆದ ಎರಡು ಗಂಟೆಗಳ ಒಳಗೆ ಮಾಹಿತಿ ನೀಡಿದರೆ ಪ್ರಕರಣ ಭೇದಿಸಬಹುದು. ನಿಧಾನವಾಗಿ ದೂರ ದಾಖಲಾದರೆ ಕಳೆದು ಹೋದ ಹಣವನ್ನು ಹಿಂಪಡೆಯಲು ಕಷ್ಟವಾಗಲಿದೆ. ಸಾಕಷ್ಟು ಪ್ರಕರಣಗಳಲ್ಲಿ ತಡವಾಗಿ ದೂರುಗಳು ದಾಖಲುತ್ತಿವೆ. ತಕ್ಷಣವೇ ಕಾರ್ಯಪ್ರವೃತ್ತರಾಗಿ ದೂರು ನೀಡಿ ಎಂದು ಮನವಿ ಮಾಡಿದರು.

Key words: Online-Cheating- mysore- SP –Chetan-information