ಓಮಿಕ್ರಾನ್ ರೂಪಾಂತರ ಹೊಸ ತಳಿ ಬಗ್ಗೆ ಯಾವುದೇ ಆತಂಕವಿಲ್ಲ: ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ- ಆರೋಗ್ಯ ಸಚಿವ ಸುಧಾಕರ್.

kannada t-shirts

ಮೈಸೂರು,ಅಕ್ಟೋಬರ್,27,2022(www.justkannada.in): ಓಮಿಕ್ರಾನ್ ರೂಪಾಂತರ ಹೊಸ ತಳಿ ಪತ್ತೆ ವಿಚಾರ ಸಂಬಂಧ  ರಾಜ್ಯದಲ್ಲಿ ಯಾವುದೇ ಆತಂಕವಿಲ್ಲ, ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಮೈಸೂರು ಜಿಲ್ಲಾ‌ ಪಂಚಾಯಿತಿ ಸಭಾಂಗಣದಲ್ಲಿ ಆರೋಗ್ಯ ಸಚಿವ ಡಾ ಕೆ ಸುಧಾಕರ್  ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳ ಆರೋಗ್ಯಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಇಂದು ಇಡೀ ದಿನ‌ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ.

ಓಮಿಕ್ರಾನ್ ರೂಪಾಂತರ ಹೊಸ ತಳಿ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಸುಧಾಕರ್,  ರಾಜ್ಯದಲ್ಲಿ ಯಾವುದೇ ಆತಂಕವಿಲ್ಲ, ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಮಾಸ್ಕ್ ಕಡ್ಡಾಯದ ಬಗ್ಗೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ. ಮಹಾರಾಷ್ಟ್ರದಲ್ಲಿ ಒಂದು ಪ್ರಕರಣ ಪತ್ತೆಯಾಗಿದ್ದು, ಅಮೆರಿಕಾದಲ್ಲಿ ಈ ಪ್ರಕರಣ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಿಗೆ ಮಾರ್ಗಸೂಚಿ ನೀಡಲಾಗಿದೆ. ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ‌ನೀಡಲಾಗಿದೆ. ಆದಷ್ಟು ಬೇಗ ಜನರು ಕೂಡ ಮೂರನೇ ಡೋಸ್ ಪಡೆಯುವುದು ಒಳ್ಳೆಯದು ಎಂದರು.august-15-number-coronavirus-infections-increase-minister-dr-k-the-reformer

ಅವರು ಯಾವಗಲೂ ನಾನೊಂದು ತೀರ ನೀನೊಂದು ತೀರ

ಸಿದ್ದರಾಮಯ್ಯ  ಮತ್ತು ಡಿ ಕೆ ಶಿವಕುಮಾರ್ ರಾಜ್ಯದ ಉತ್ತರ ದಕ್ಷಿಣ ಭಾಗದಲ್ಲಿ ಪಾದಯಾತ್ರೆಗೆ ಮುಂದಾಗಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಅವರು ಯಾವಗಲೂ ನಾನೊಂದು ತೀರ ನೀನೊಂದು ತೀರ. ಆದ್ದರಿಂದ ಒಬ್ಬರು ದಕ್ಷಿಣ ಹಾಗೂ ಮತ್ತೊಬ್ಬರು ಉತ್ತರಕ್ಕೆ ಹೊರಟಿದ್ದಾರೆ. ಇದರಲ್ಲಿ ಅಚ್ಚರಿ ಏನು ಇಲ್ಲ. ಚುನಾವಣೆ ವೇಳೆ ಯಾತ್ರೆಗಳು ಸಾಮಾನ್ಯ. ನಾಲ್ಕುವರೆ ವರ್ಷದಿಂದ ಇವರಿಗೆ ಯಾವ ಸಮಸ್ಯೆಗಳೂ ಕಂಡಿಲ್ಲ. ಈಗ ಚುನಾವಣೆಗಾಗಿ ಬಂದಿದ್ದಾರೆ. ಜನರು ಎಲ್ಲರಿಗಿಂತ ಬುದ್ದಿವಂತರಿದ್ದಾರೆ. ಇವೆಲ್ಲವೂ ಜನರಿಗೆ ಅರ್ಥವಾಗಲಿದೆ ಎಂದರು.

ಸಿದ್ದರಾಮಯ್ಯ ಎಲ್ಲವನ್ನೂ ಕಲಿತಿದ್ದಾರೆ. ಆದರೆ ಬಹುವಚನ ಮಾತ್ರ ಕಲಿತಿಲ್ಲ.

ತಮ್ಮ ವಿರುದ್ದ ಮಾಜಿ ಸಿಎಂ  ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ ನಡೆಸಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಸಿದ್ದರಾಮಯ್ಯ ಎಲ್ಲವನ್ನೂ ಕಲಿತಿದ್ದಾರೆ. ಆದರೆ ಅವರು ಬಹುವಚನ ಮಾತ್ರ ಕಲಿತಿಲ್ಲ. ಅವರು ಏಕವಚನದಲ್ಲಿ ಮಾತನಾಡುವುದರಲ್ಲಿ ಯಾವುದೇ ವಿಶೇಷತೆ ಇಲ್ಲ.  ಕೆಲ ಜಿಲ್ಲೆಗಳಲ್ಲಿ ಜೆಡಿಎಸ್ ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಎದರಿಸುತ್ತಿದ್ದೇನೆ. ಅದಕ್ಕಾಗಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಕಾಂಗ್ರೆಸ್ ‌ನಿಂದ ಬಿಜೆಪಿಗೆ ಬಂದಿರುವ ಯಾರು ಸಹ ವಾಪಸ್ಸು ಹೋಗುವುದಿಲ್ಲ. ಎಚ್ ವಿಶ್ವನಾಥ್ ಸಹ ಹೋಗುವುದಿಲ್ಲ ಎಂದು ಭಾವಿಸಿದ್ದೇನೆ. ಆದರೆ ಬಿಜೆಪಿ ಸೇರ್ಪಡೆ ವೇಳೆ ಎಚ್ ವಿಶ್ವನಾಥ್ ನಮ್ಮ ಜೊತೆ ಇರಲಿಲ್ಲ ಎಂದರು.

ಆರೋಗ್ಯ ಇಲಾಖೆಯಲ್ಲಿ ಖಾಲಿ ಬಿದ್ದಿರುವ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಿಕೊಳ್ಳಲಾಗುವುದು. ಕೆಲ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು. ಮೈಸೂರಿನ ಕೆ ಆರ್ ಆಸ್ಪತ್ರೆಗೆ ಕಾಯಕಲ್ಪ ನೀಡಲಾಗುತ್ತದೆ ಎಂದು ಸುಧಾಕರ್ ತಿಳಿಸಿದರು.

Key words: Omicron -Strict -vigilance – border districts-Health Minister- Sudhakar-mysore

ENGLISH SUMMARY…

Omicron new variant – no need to worry: Alert in border districts – Health Minister Dr. K. Sudhakar
Mysuru, October 27, 2022 (www.justkannada.in): Health Minister Dr. K. Sudhakar today expressed his view that there is no need to worry about the new Omicron variant.
He participated in the progress review meeting held at the Zilla Panchayat auditorium in Mysuru today. Health Department officers from various districts attended the meeting.
Speaking about the Omicron new variant, the Health Minister informed that there is need to worry in the State, and however precautionary measures have been already taken. “No decision has been taken regarding making wearing of masks compulsory. One new case has been found in Maharashtra. New COVID cases has increased in America. Instructions have been given to the Deputy Commissioners be alert in the border districts. However, I request all the eligible people of the state to get the 3rd dose of COVID vaccination,” he said.
On the occasion, he informed that all the vacant posts in the Health Department would be soon filled up. Direct recruitment will be made for a few posts and measures will be taken to renovate the K.R. Hospital in Mysuru, he added.august-15-number-coronavirus-infections-increase-minister-dr-k-the-reformer
Keywords: Health Minister/ Dr. K. Sudhakar/ Omicron new variant/ no worry

website developers in mysore