ಒಮಿಕ್ರಾನ್ ಭೀತಿ: ನಾಳೆ ಕಟ್ಟುನಿಟ್ಟಿನ ಕ್ರಮದ ಬಗ್ಗೆ ನಿರ್ಧಾರ- ಸಿಎಂ ಬಸವರಾಜ ಬೊಮ್ಮಾಯಿ.

Promotion

ಹುಬ್ಬಳ್ಳಿ,ಡಿಸೆಂಬರ್,25,2021(www.justkannada.in): ರಾಜ್ಯದಲ್ಲಿ ಕೊರೋನಾ ರೂಪಾಂತರಿ ಒಮಿಕ್ರಾನ್ ಭೀತಿ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಹೊಸವರ್ಷಾಚರಣೆ ಸಂಭ್ರಮಕ್ಕೆ ಬ್ರೇಕ್ ಹಾಕಲಾಗಿದೆ. ಈ ಮಧ್ಯೆ ಒಮಿಕ್ರಾನ್ ಹರಡದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ನಾಳೆ ನಿರ್ಧಾರ ಮಾಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈ ಕುರಿತು ಹುಬ್ಬಳ್ಳಿಯಲ್ಲಿ  ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ಮಹಾರಾಷ್ಟ್ರ, ಕೇರಳದಲ್ಲಿ ಮಾತ್ರ ಒಮಿಕ್ರಾನ್ ಆತಂಕ ಸೃಷ್ಠಿಯಾಗಿತ್ತು. ಈಗ ತಮಿಳುನಾಡಿನಲ್ಲೂ ಒಮಿಕ್ರಾನ್ ಹೆಚ್ಚಾಗಿದೆ. ನಾಳೆ ತಜ್ಞರ ಜತೆ ಸಭೆ ನಡೆಸಲಾಗುತ್ತದೆ. ಸಭೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ಮೂಲಕ  ರಾಜ್ಯದಲ್ಲಿ ಕಠಿಣ ನಿಯಮ ಜಾರಿ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮುನ್ಸೂಚನೆ ನೀಡಿದ್ದಾರೆ.

Key words: Omicron-panic-Decision -stringent –action- tomorrow-CM-Basavaraja Bommai