ಒಮಿಕ್ರಾನ್ ಭೀತಿ ಹಿನ್ನೆಲೆ: ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಪತ್ರ.

Promotion

ನವದೆಹಲಿ,ಡಿಸೆಂಬರ್,3,2021(www.justkannada.in):  ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೋನಾ ಹೊಸತಳಿ ಒಮಿಕ್ರಾನ್ ಇದೀಗ ದೇಶಕ್ಕೂ ಕಾಲಿಟ್ಟಿದ್ದು ಕರ್ನಾಟಕದಲ್ಲಿ ಇಬ್ಬರಿಗೆ ಈ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಒಮಿಕ್ರಾನ್ ಹರಡದಂತೆ ತಡೆಗಟ್ಟುವ ಕುರಿತು ಎಲ್ಲಾ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಪತ್ರ ಬರೆದಿದೆ.

ಈ ಸಂಬಂಧ ಎಲ್ಲಾ ರಾಜ್ಯಗಳ ಸಿಎಸ್ ಗಳಿಗೆ ಪತ್ರ ಬರೆದಿರುವ  ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, ದೇಶದಲ್ಲಿ ಒಮಿಕ್ರಾನ್ ಹರಡುವಿಕೆ ಪ್ರಾಥಮಿಕ ಹಂತದಲ್ಲಿದೆ.  ಡೆಲ್ಟಾ, ಕೊರೋನಾಗಿಂತ ಇದು ವೇಗವಾಗಿ ಹರಡುತ್ತದೆ. ಹೀಗಾಗಿ ಒಮಿಕ್ರಾನ್ ಹರಡದಂತೆ ಎಲ್ಲಾ ರಾಜ್ಯಗಳು ತಡೆಗಟ್ಟಬೇಕು. ಒಮಿಕ್ರಾನ್ ತಡೆಗಟ್ಟಲು ಹೆಚ್ಚು ಜಾಗರೂಕರಾಗಿ ಕೆಲಸ ನಿರ್ವಹಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ಒಮಿಕ್ರಾನ್ ಕರ್ನಾಟಕದಲ್ಲಿ ಪತ್ತೆಯಾದ ಬೆನ್ನಲ್ಲೆ ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರಿಗಳು ತಜ್ಞರು ಸಚಿವರ ಜತೆ ಸಭೆ ನಡೆಸಿ ಚರ್ಚಿಸಿದ್ದು ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ.

Key words: Omicron- dread Letter – central government – all states.