ಒಲಿಂಪಿಕ್ ಕ್ರೀಡಾಕೂಟ ಉದ್ಘಾಟನೆ: ತ್ರಿವರ್ಣ ಧ್ವಜ ಹಿಡಿದು ಸಾಗಲಿರುವ ಮನ್ಪ್ರೀತ್ ಸಿಂಗ್, ಮೇರಿ ಕೋಮ್

Promotion

ಬೆಂಗಳೂರು, ಜುಲೈ 23, 2021 (www.justkannada.in): ಒಲಿಂಪಿಕ್ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ  50 ಭಾರತೀಯ ಕ್ರೀಡಾಪಟುಗಳು ಮಾತ್ರ ಭಾಗವಹಿಸಲ್ಲಿದ್ದಾರೆ .

ಭಾರತ ಪುರುಷರ ಹಾಕಿ ನಾಯಕ ಮನ್ಪ್ರೀತ್ ಸಿಂಗ್ ಮತ್ತು ಆರು ಬಾರಿ ವಿಶ್ವ ಚಾಂಪಿಯನ್ ಮಹಿಳಾ ಬಾಕ್ಸರ್ ಎಂ ಸಿ ಮೇರಿ ಕೋಮ್ ಅವರನ್ನು ತ್ರಿವರ್ಣ ಧ್ವಜ ಹಿಡಿದು ಮುನ್ನಡೆಸಲಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಮತ್ತು ಅಧಿಕಾರಿಗಳ ಸಂಖ್ಯೆಯನ್ನು 50 ರೊಳಗೆ ಸೀಮಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮೊದಲ ಸ್ಪರ್ಧೆಯ ದಿನದಂದು 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಶೂಟರ್‍ಗಳಾದ ಸೌರಭ್ ಚೌಧರಿ, ಅಭಿಷೇಕ್ ವರ್ಮಾ, ಅಪೂರ್ವಿ ಚಂದೇಲಾ ಮತ್ತು ಎಲವೆನಿಲ್ ವಲರಿವನ್ ಭಾಗವಹಿಸಲಿದ್ದಾರೆ.

ಬಾಕ್ಸಿಂಗ್, ಬಿಲ್ಲುಗಾರಿಕೆ ಮತ್ತು ಪುರುಷರ ಮತ್ತು ಮಹಿಳಾ ಹಾಕಿ ಸ್ಪರ್ಧಿಸಲಿವೆ.ಈ ಭಾರಿ ಗಮನಾರ್ಹ ಸಾಧನೆಗೆ ಎಲ್ಲರು ಉತ್ಸುಕರಾಗಿದ್ದಾರೆ