ಇನ್ನು ಮೂರು ದಿನಗಳಲ್ಲಿ ಜೆಡಿಎಸ್ ಗೆ ಅಧಿಕೃತ ರಾಜೀನಾಮೆ- ಸಂದೇಶ್ ನಾಗರಾಜ್ ಘೋಷಣೆ.

ಮೈಸೂರು,ನವೆಂಬರ್,12,2021(www.justkannada.in): ಮೈಸೂರು ಭಾಗದಲ್ಲಿ ಜೆಡಿಎಸ್ ನ ಮತ್ತೊಂದು ವಿಕೆಟ್ ಪತನವಾಗಿದ್ದು ಇನ್ನ ಮೂರು ದಿನಗಳಲ್ಲಿ ಜೆಡಿಎಸ್ ಗೆ ಅಧಿಕೃತವಾಗಿ ರಾಜೀನಾಮೆ ಕೊಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಘೋಷಿಸಿದ್ದಾರೆ.

ಈ ಕುರಿತು ಮಾತನಾಡಿದ ಸಂದೇಶ್ ನಾಗರಾಜ್, ಜೆಡಿಎಸ್ ಗೆ ಗುಡ್ ಬೈ ಹೇಳಿ ಮೈಸೂರಿನ ಬಿಜೆಪಿ ಕಚೇರಿಯಲ್ಲೆ ಬಿಜೆಪಿ ಸೇರ್ಪಡೆಯಾಗುತ್ತೇನೆ. ಬಿಜೆಪಿ ಸೇರುವ ದಿನ ನಾನು ಯಾಕೆ  ಜೆಡಿಎಸ್ ಬಿಟ್ಟೆ ಎಂಬುದನ್ನು ಸುದ್ದಿಗೋಷ್ಠಿ  ನಡೆಸಿ ವಿವರಿಸುತ್ತೇನೆ ಎಂದರು.

ನನ್ನ ಅಗತ್ಯ ಎಚ್.ಡಿ ಕುಮಾರಸ್ವಾಮಿ ಅವರಿಗೆ ಇದ್ದಂತಿಲ್ಲ.  ಅಗತ್ಯವಿಲ್ಲದ ಕಡೆ ನಾನು ಯಾಕೆ ಇರಬೇಕು. ಕಳೆದ ಮೂರು ವರ್ಷಗಳಿಂದ ನಾನು ಮಾನಸಿಕವಾಗಿ ಬಿಜೆಪಿಯಲ್ಲೆ ಇದ್ದೇನೆ. ದೈಹಿಕವಾಗಿ ಅಷ್ಟೇ ಜೆಡಿಎಸ್ ನಲ್ಲಿದ್ದೆ. ವಿಧಾನ ಪರಿಷತ್ ಒಳಗೂ ನಾನು ಬಿಜೆಪಿ ಪರವೇ ಬಿಲ್ ಗಳಿಗೆ ಕೈ ಎತ್ತಿದ್ದೇನೆ. ಮೂರು ವರ್ಷದಿಂದ ನಾನು ಜೆಡಿಎಸ್ ನಾಯಕರ ಸಂರ್ಪಕದಲ್ಲಿ ಇಲ್ಲ. ವಿಧಾನ ಪರಿಷತ್ ಚುನಾವಣೆಯಲ್ಲಿ ನನಗೆ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಸಂದೇಶ್ ನಾಗರಾಜ್ ತಿಳಿಸಿದರು.

Key words: Official resignation – JDS – three days-Sandesh Nagaraj.

ENGLISH SUMMARY…

“I will resign from JDS within the next 3 days”: Sandesh Nagaraj announces
Mysuru, November 12, 2021 (www.justkannada.in): JDS MLC Sandesh Nagaraj has informed that he will resign from the party within three days. With this the JDS has lost yet another wicket.
Speaking in Mysuru today, Sandesh Nagaraj informed that he would bid good bye to JDS in Mysuru itself and join the BJP officially. “I will announce why I quit JDS on the day of joining BJP,” he added.
“I don’t think H.D. Kumaraswamy needs me. Why should I stay in a place where I am not required? Mentally I am with the BJP from the last three years. Only my body is with JDS. I have also supported the BJP bills even in the legislative council. I am not in touch with the JDS leaders from the last three years. I am hopeful of getting a ticket from BJP in the MLC elections,” he said.
Keywords: JDS MLC Sandesh Nagaraj/ good bye to JDS/ announce/ joins BJP