ಚಾಮುಂಡಿ ಬೆಟ್ಟದ ರಸ್ತೆ ಕುಸಿದಿರುವ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಭೇಟಿ: 15 ದಿನಗಳ ಕಾಲ ರಸ್ತೆ ಮಾರ್ಗ ಬಂದ್…

Promotion

ಮೈಸೂರು,ಅ,23,2019(www.justkajnnada.in):  ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಭಾರೀ ಮಳೆಗೆ  ಚಾಮುಂಡಿಬೆಟ್ಟದ ರಸ್ತೆ ಬಳಿ ಭೂಕುಸಿತವಾಗಿದ್ದು ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಡಾಲ್ ಹೌಸಿ ವೀವ್ ಪಾಯಿಂಟ್ ನಿಂದ ನಂದಿ ವಿಗ್ರಕ್ಕೆ ತೆರಳುವ ಮಾರ್ಗದಲ್ಲಿ ಸುಮಾರು 15 ಮೀಟರ್ ನಷ್ಟು ತಡೆಗೋಡೆ 7ಮೀಟರ್ ನಷ್ಟು ಕುಸಿದಿದೆ. ಹೀಗಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮುಂದಿನ I5 ದಿನಗಳಲ್ಲಿ ಉತ್ತಮ ಅಡಿಪಾಯದೊಂದಿಗೆ ಆರ್. ಸಿಸಿ ತಡೆಗೋಡೆ ನಿರ್ಮಿಸಲಾಗುವುದು. ತುರ್ತು ಕಾಮಗಾರಿ ನಡೆಸಲು ಸಿದ್ಧತೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಲೋಕೋಪಯೋಗಿ ಎಇಇ ರಾಜು ಅವರು, ಮರಳು ಮಿಶ್ರಿತ ಮಣ್ಣಿನಿಂದ ಕೂಡಿದ್ದಾಗಿದ್ದರಿಂದ ತಡೆಗೋಡೆ ಕುಸಿದಿದೆ. ಸ್ಥಳದಲ್ಲಿ  ಒಬ್ಬ ಕೋಬ್ರಾ ಮತ್ತು ಇಬ್ಬರು ಸಂಚಾರಿ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ರಸ್ತೆ ಕುಸಿದಿರುವುದರಿಂದ ಬೃಹತ್ ನಂದಿಗೆ ಬರುವ ಎರಡು ಮಾರ್ಗವು ಬಂದ್ ಮಾಡಲಾಗಿದೆ. ನಂದಿ ವಿಗ್ರಹಕ್ಕೆ ತೆರಳಲು ಅನ್ಯ ಮಾರ್ಗಗಳು ಇದ್ದು ಆ ಮಾರ್ಗಗಳ ಮೂಲಕ  ನಂದಿ ವಿಗ್ರಹಕ್ಕೆ  ತೆರಳಬಹುದು.ಪ್ರವಾಸಿಗರಿಗೆ ಇದರಿಂದ ಯಾವುದೇ ತೊಂದರೆಯಿಲ್ಲ ಎಂದು ಮಾಹಿತಿ ನೀಡಿದರು.

10-15 ದಿನಗಳಲ್ಲಿ ರಸ್ತೆ ದುರಸ್ತಿ ಮಾಡುವಂತೆ ನಂದಿ ಬಳಿಯ ವ್ಯಾಪಾರಸ್ಥರ ಆಗ್ರಹ….

ಚಾಮುಂಡಿ ಬೆಟ್ಟದಿಂದ ನಂದಿಗೆ ಹೋಗುವ ಮಾರ್ಗದಲ್ಲಿ ಭೂಕುಸಿತವಾಗಿದ್ದು, ವಾಹನಗಳ ಸಂಚರಿಸಿದರೇ ಅಪಾಯದ ಸ್ಥಿತಿ ಉಂಟಾಗಲಿದೆ. ಇನ್ನು ರಸ್ತೆ ಮಾರ್ಗ ಬಂದ್ ಮಾಡಿದರೆ ನಂದಿ ಬಳಿಯ ವ್ಯಾಪಾರಸ್ಥರಿಗೆ ಸಂಕಷ್ಟ ಎದುರಾಗಲಿದೆ. ರಸ್ತೆ ಬಂದ್ ಮಾಡಿದರೆ ನಂದಿ ಕಡೆಗೆ ಪ್ರವಾಸಿಗರು ಬರೋದಿಲ್ಲ. ಹೀಗಾಗಿ 10-15 ದಿನಗಳಲ್ಲಿ ರಸ್ತೆ ದುರಸ್ತಿ ಮಾಡುವಂತೆ ನಂದಿ ಬಳಿಯ ವ್ಯಾಪಾರಸ್ಥರು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಚಾಮುಂಡಿಬೆಟ್ಟದಿಂದ‌ ನಂದಿಗೆ ಹೋಗುವ ರಸ್ತೆ 15 ದಿನಗಳ ಕಾಲ ಬಂದ್

ಭೂಕುಸಿತವಾಗಿದ್ದ‌ ಸ್ಥಳಕ್ಕೆ  ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಲೋಕೋಪಯೋಗಿ ಇಲಾಖೆ ಎಕ್ಸಿ ಕ್ಯೂಟಿವ್ ಇಂಜಿನಿಯರ್ ಶ್ರೀನಿವಾಸ್, ಮುಂದಿನ 10-15 ದಿನಗಳಲ್ಲಿ ರಸ್ತೆ ಸುಸ್ಥಿತೆಗೆ ತರಲು‌ ಪ್ರಯತ್ನ ಮಾಡುತ್ತೇವೆ. ಅಲ್ಲಿವರಗೂ ಈ ಮಾರ್ಗ ಬಂದ್ ಮಾಡೋದೇ ಸೂಕ್ತ. ಮಳೆ ಮುಂದುವರಿದಿರುವ ಹಿನ್ನೆಲೆ. ಮುಂಜಾಗ್ರತೆ ದೃಷ್ಟಿಯಿಂದ ‌ವಾಹನಗಳ ಓಡಾಟ ಸ್ಥಗಿತ ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

Key words: Officers – Public Works Department- visit -Chamundi Hill –Road- Repair-15days