ಸಿದ‍್ಧರಾಮಯ್ಯ ಸುಳ್ಳನ್ನೇ ತಮ್ಮ ಮನೆ ದೇವರು ಮಾಡಿಕೊಂಡಿದ್ದಾರೆ- ಶಾಸಕ ಸಿ.ಟಿ ರವಿ ವಾಗ್ದಾಳಿ.

Promotion

ಚಿಕ್ಕಮಗಳೂರು,ಮೇ,14,2022(www.justkannada.in): ಒಬಿಸಿ ಮೀಸಲಾತಿ ಹೋಗಲು ಬಿಜೆಪಿ ಕಾರಣ ಅಂತಾರೆ. ಸಿದ್ಧರಾಮಯ್ಯ ಸುಳ್ಳನ್ನೇ ತಮ್ಮ ಮನೆ ದೇವರು ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಾಗ್ದಾಳಿ ನಡೆಸಿದರು.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ, ಸಿದ್ದರಾಮಯ್ಯ ಸುಳ್ಳು ಆರೋಪ ಮಾಡುತ್ತಿದ್ದಾರೆ.  ಒಬಿಸಿ ಮೀಸಲಾತಿ ಹೋಗಲು ಬಿಜೆಪಿ ಕಾರಣ ಅಂತಾರೆ. ಮಹಾರಾಷ್ಡ್ರ ಸರ್ಕಾರದ ಬಗ್ಗೆ ಮೀಸಲಾತಿ ವಿಚಾರಣೆ ನಡೆದಿದೆ.  ಮಹಾರಾಷ್ಟ್ರದಲ್ಲಿರುವುದು ಕಾಂಗ್ರೆಸ್ ಬೆಂಬಲಿತ ಸರ್ಕಾರ.  ಹೀಗಾಗಿ ಇದಕ್ಕೆ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ. ಅವರು ಎತ್ತಿ ಹಿಡಿದಿದ್ರೆ ಇಂದು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಕಿಡಿಕಾರಿದರು.

ನಮ್ಮ ಸರ್ಕಾರ ಹಿಂದುಳಿದವರ ಪರ ಇದೆ.  ಹಿದುಳಿದ ವರ್ಗಗಳ ಆಯೋಗ ರಚನೆ ಮಾಡಿದ್ದು ಬಿಜೆಪಿ. ಇದನ್ನ ಸಿದ್ಧರಾಮಯ್ಯ ಅರ್ಥ ಮಾಡಿಕೊಳ್ಳಬೇಕು ಎಂದು ಸಿ.ಟಿ ರವಿ ಟಾಂಗ್ ನೀಡಿದರು.

Key words: OBC-reservation-Siddaramaiah-MLA-CT Ravi