ಇಂದು ಪವರ್ ಸ್ಟಾರ್’ಗೆ ನುಡಿ ನಮನ: ಬೆಂಗಳೂರಿನತ್ತ ಸಿನಿ ಗಣ್ಯರ ದಂಡು

Promotion

ಬೆಂಗಳೂರು, ನವೆಂಬರ್ 16, 2021 (www.justkannada.in): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಇಂದು ನುಡಿ ನಮನ ಸಲ್ಲಿಸಲಾಗುತ್ತಿದೆ.

ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಂಪುಟ ಸಚಿವರೆಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಡಾ.ರಾಜ್ ಕುಟುಂಬದಿಂದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮತ್ತು ಕುಟುಂಬಸ್ಥರು ಭಾಗಿಯಾಗುತ್ತಾರೆ.

ಸ್ಯಾಂಡಲ್ ವುಡ್ ನಟರಾದ ಕಿಚ್ಚ ಸುದೀಪ್, ಉಪೇಂದ್ರ, ಯಶ್, ರವಿಚಂದ್ರನ್, ಶ್ರೀಮುರಳಿ, ಧ್ರುವ ಸರ್ಜಾ, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಗಣೇಶ್ ಹಾಗೂ ಪುನೀತ್ ಜೊತೆ ನಟಿಸಿದ ನಟಿಯರು, ಇತರ ಕಲಾವಿದರು ಆಗಮಿಸಲಿದ್ದಾರೆ.

ಸೂಪರ್ ಸ್ಟಾರ್ ರಜನೀಕಾಂತ್, ಧನುಷ್, ವಿಜಯ್, ಅಜಿತ್, ವಿಜಯ್ ಸೇತುಪತಿ, ಸೂರ್ಯ, ಅಲ್ಲು ಅರ್ಜುನ್, ಜ್ಯೂ.ಎನ್ ಟಿಆರ್, ರಾಮ್ ಚರಣ್ ತೇಜ್, ಚಿರಂಜೀವಿ, ಪ್ರಭಾಸ್, ಮಲಯಾಳಂ ನಟ ಮೋಹನ್ ಲಾಲ್, ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆಯಿದೆ.

ಮೊದಲಿಗೆ ಗುರಕಿರಣ್ ನೇತೃತ್ವದಲ್ಲಿ ಗೀತ ನಮನ ನಡೆಯಲಿದ್ದು, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಅನುರಾಧ ಭಟ್, ಶಮಿತಾ ಮಲ್ನಾಡ್ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.