ಮೈಸೂರು ಜಿಲ್ಲಾ ಪತ್ರಕರ್ತ ಸಂಘದ ಚುನಾವಣೆಗೆ ದಿನಾಂಕ ನಿಗದಿ…

Promotion

ಮೈಸೂರು,ಅಕ್ಟೋಬರ್,10,2020(www.justkannada.in): ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ನವೆಂಬರ್  7 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಕಾಶಿನಾಥ್  ಮಾಹಿತಿ ನೀಡಿದರು.jk-logo-justkannada-logo

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚುನಾವಣಾಧಿಕಾರಿ ಕಾಶಿನಾಥ್, 2020-23 ರ ಅವಧಿಯ ಪಧಾಧಿಕಾರಿಗಳ ಹಾಗೂ ಕಾರ್ಯಕಾರಿಣಿ ಸಮಿತಿ ಚುನಾವಣೆ ನವೆಂಬರ್ 7 ರಂದು ನಡೆಯಲಿದೆ.  ಅಕ್ಟೊಬರ್ 10 ರಂದು ಅರ್ಹ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಅಕ್ಟೋಬರ್ 22 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು ಬೆಳಗ್ಗೆ 10.30 ರಿಂದ‌1.30ರೊಳಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿರುತ್ತದೆ. ಅಕ್ಟೋಬರ್ 26 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದೆ. ಅಕ್ಟೋಬರ್ 26ರ ಮಧ್ಯಾಹ್ನ 1.30 ಒಳಗೆ ನಾಮಪತ್ರ ಸಲ್ಲಿಸಲು ಅವಕಾಶವಿರುತ್ತದೆ ಎಂದು ಮಾಹಿತಿ ನೀಡಿದರು.November 7-Mysore District Journalists Association- Election

ಹಾಗೆಯೇ ಅಕ್ಟೋಬರ್ 27 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು ಅಕ್ಟೋಬರ್ 29 ಮಧ್ಯಾಹ್ನ 2 ಗಂಟೆಯ ಒಳಗೆ ನಾಮಪತ್ರ ಹಿಂಪಡೆಯಲು ಅವಕಾಶವಿರುತ್ತದೆ. ನಂತರ ನವೆಂಬರ್ 7 ರಂದು ಬೆಳಗ್ಗೆ 8 ರಿಂದ 2 ವರೆಗೆ ಮತದಾನ ನಡೆಯಲಿದೆ. ಅಂದು ಸಂಜೆ 4 ರಿಂದ ಮತ ಎಣಿಕೆ  ನಡೆಯಲಿದ್ದು, ನಂತರ ಫಲಿತಾಂಶ ಘೋಷಣೆಯಾಗಲಿದೆ ಎಂದು ಚುನಾವಣಾಧಿಕಾರಿ ಕಾಶೀನಾಥ್ ತಿಳಿಸಿದರು.

Key words: November 7-Mysore District Journalists Association- Election