ವಿಂಬಲ್ಡನ್‌ ಪುರುಷರ ಸಿಂಗಲ್ಸ್: ನೊವಾಕ್‌ ಜೊಕೊವಿಚ್‌ ಸೆಮಿಫೈನಲ್ಸ್’ಗೆ

Promotion

ಲಂಡನ್‌, ಜುಲೈ 11, 2019 (www.justkannada.in): ಅಗ್ರಶ್ರೇಯಾಂಕದ ಆಟಗಾರ ನೊವಾಕ್‌ ಜೊಕೊವಿಚ್‌ ವಿಂಬಲ್ಡನ್‌ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ ಪ್ರವೇಶಿಸಿದರು.

ಈ ಮೂಲಕ ಒಂಬತ್ತನೇ ಬಾರಿ ಟೂರ್ನಿಯ ಸೆಮಿಫೈನಲ್‌ಗೆ ಪ್ರವೇಶಿಸಿದರು. ವಿಶ್ವ ಕ್ರಮಾಂಕಕ್ಕೆ ತಕ್ಕ ಆಟವಾಡಿದ ಸರ್ಬಿಯಾದ ಆಟಗಾರ, ಬೆಲ್ಜಿಯಂ ಆಟಗಾರ ಡೇವಿಡ್‌ ಗಫಿನ್‌ ಅವರನ್ನು 6-4, 6-0, 6-2ರಿಂದ ಮಣಿಸಿದರು.

ಜೊಕೊವಿಚ್‌ ಪಂದ್ಯದಲ್ಲಿ ಮೂರು ಏಸ್‌ಗಳನ್ನು ಸಿಡಿಸಿದರೆ, ಗಫಿನ್‌ ಸಿಡಿಸಿದ್ದು 4 ಏಸ್‌. ಗಫಿನ್‌ ಎಸಗಿದ 5 ಡಬಲ್‌ ಫಾಲ್ಟ್‌ಗಳು ಅವರ ಗೆಲುವಿಗೆ ಮುಳುವಾದವು.