ಸತ್ಯಕ್ಕಿಂತ ಇನ್ನೊಂದು ತಪಸ್ಸು ಯಾವುದು ಇಲ್ಲ- ವಿಚಾರಣೆಗೆ ಹಾಜರಾಗುವ ಮುನ್ನ ರಾಹುಲ್ ಗಾಂಧಿ ಟ್ವೀಟ್.

Promotion

ನವದೆಹಲಿ,ಜೂನ್,14,2022(www.justkannada.in): ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿ ಅವ್ಯವಹಾರ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸುತ್ತಿರುವ  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಸಹ ವಿಚಾರಣೆಗೆ ಹಾಜರಾಗಲಿದ್ದಾರೆ.

ಇನ್ನು ಕೆಲವೇ ಹೊತ್ತಿನಲ್ಲಿ ಅವರು ದೆಹಲಿಯ ಇಡಿ ಕಚೇರಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದು ಅದಕ್ಕೂ ಮುನ್ನ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು ಸತ್ಯಕ್ಕಿಂತ ಇನ್ನೊಂದು ತಪಸ್ಸು ಯಾವುದು ಇಲ್ಲ. ಸುಳ್ಳು ಹೇಳುವುದು ಪಾಪದ ಸಮಾನ ಎಂದು ಹೇಳಿದ್ದಾರೆ.

ಕಬೀರ್ ದಾಸ್ ಜಯಂತಿ  ಅಂಗವಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ಸುಳ್ಳು ಪಾಪಕ್ಕೆ ಸಮ, ಸತ್ಯ ತಪಸ್ಸಿಗೆ ಸಮ, ಹೃದಯಕ್ಕೆ ಸರಿಯಾದ ಸತ್ಯ ಹೇಳಿದರೆ ಮನಸ್ಸು, ಸತ್ಯಕ್ಕಿಂತ ಮಿಗಿಲಾದ ತಪಸ್ಸು ಇಲ್ಲ. ಹೃದಯ ನಿಮ್ಮದಾಗುತ್ತದೆ. ಸಮಾಜಕ್ಕೆ ಸಮಾನತೆ, ಸೇವೆ, ಪರಸ್ಪರ ಸೌಹಾರ್ದತೆ ಮತ್ತು ಪ್ರೀತಿಯ ಪಾಠವನ್ನು ಕಲಿಸಿದ ಸಂತ ಕಬೀರ್ ದಾಸ್ ಜೀ ಅವರ ಜನ್ಮದಿನದಂದು ಅವರಿಗೆ ನಮನಗಳು ಎಂದು ತಿಳಿಸಿದ್ದಾರೆ.

Key words: nothing- more –penance-truth-Rahul Gandhi -tweet