ಎಲ್ಲರೂ ಸಿಎಂ ನಿವಾಸಕ್ಕೆ ಸಚಿವ ಸ್ಥಾನ ಕೇಳಲು ಹೋಗಲ್ಲ- ಸಚಿವ ಬಿ.ಸಿ ಪಾಟೀಲ್….

ಬಳ್ಳಾರಿ,ನವೆಂಬರ್,19,2020(www.justkannada.in):  ಸಚಿವ ಸಂಪುಟ ವಿಸ್ತರಣೆ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪ ಈಗಾಗಲೇ ಸಚಿವಾಕಾಂಕ್ಷಿಗಳ ಪಟ್ಟಿಯನ್ನ ವರಿಷ್ಟರಿಗೆ ನೀಡಿದ್ದು ಇನ್ನು ಮೂರ್ನಾಲ್ಕು ದಿನಗಳಲ್ಲಿ ಸಚಿವರ ಪಟ್ಟಿ ಹೈಕಮಾಂಡ್ ನಿಂದ ರವಾನೆಯಾಗುವ ಸಾಧ್ಯತೆ ಇದೆ. ಈ ಮಧ್ಯೆ ಸಚಿವ ಸ್ಥಾನಕ್ಕಾಗಿ ಹಲವು ಶಾಸಕರು ಸಿಎಂ ನಿವಾಸದತ್ತ ಧಾವಿಸಿ ಲಾಬಿ ನಡೆಸುತ್ತಿದ್ದಾರೆ.kannada-journalist-media-fourth-estate-under-loss

ಈ ಕುರಿತು ಇಂದು ಬಳ್ಳಾರಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಬಿ.ಸಿ ಪಾಟೀಲ್,  ಎಲ್ಲರೂ ಸಿಎಂ ನಿವಾಸಕ್ಕೆ ಸಚಿವ ಸ್ಥಾನ ಕೇಳಲು ಹೋಗಲ್ಲ. ಬೇರೆ ಬೇರೆ ಕೆಲಸಗಳಿಗೆ ಹೋಗುತ್ತಾರೆ ಎಂದಿದ್ದಾರೆ. ಹಾಗೆಯೇ ಬಿಜೆಪಿಯಲ್ಲಿ ಮೂಲ ವಲಸಿಗರು ಎಂಬುದಿಲ್ಲ.  ಬಿಜೆಪಿ ಸೇರಿದ 17 ಮಂದಿ ಶಾಸಕರನ್ನ ಗೌರವದಿಂದ ನೋಡಿಕೊಳ್ಳುತ್ತಿದ್ದಾರೆ. ನಾವೆಲ್ಲರೂ ಅಣ್ಣತಮ್ಮಂದಿರ ರೀತಿ ಇದ್ದೇವೆ ಎಂದರು.Not -everyone -ask for - ministerial position – CM-residence- Minister- BC Patil.

ಸಚಿವ ಸಂಪುಟ ವಿಸ್ತರಣೆ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದನ್ನು ಸಿಎಂ ಬಿಎಸ್ ಯಡಿಯೂರಪ್ಪ ನಿರ್ಧರಿಸುತ್ತಾರೆ ಎಂದು ಸಚಿವ ಬಿ.ಸಿ ಪಾಟೀಲ್ ತಿಳಿಸಿದರು.

Key words: Not -everyone -ask for – ministerial position – CM-residence- Minister- BC Patil.