ನಾವು ಬಿಜೆಪಿ ಶಾಸಕರನ್ನ ಸಂಪರ್ಕ ಮಾಡಿಲ್ಲ, ಅವರೇ ಬರುತ್ತಿದ್ದಾರೆ- ಸಿಎಂ ಬೊಮ್ಮಾಯಿಗೆ ಡಿ.ಕೆ ಶಿವಕುಮಾರ್ ತಿರುಗೇಟು.

Promotion

ಬೆಂಗಳೂರು,ಮಾರ್ಚ್,29,2023(www.justkannada.in): ಡಿ.ಕೆ ಶಿವಕುಮಾರ್ ಕರೆ ಮಾಡಿ ನಮ್ಮ ಶಾಸಕರನ್ನ ಕರೆಯುತ್ತಿದ್ದಾರೆ ಎಂದು ಆರೋಪಿಸಿದ್ಧ ಸಿಎಂ ಬಸವರಾಜ ಬೊಮ್ಮಾಯಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಡಿ.ಕೆ ಶಿವಕುಮಾರ್, ನಾವು ಬಿಜೆಪಿ ಶಾಸಕರನ್ನ ಸಂಪರ್ಕ ಮಾಡಿಲ್ಲ. ಬಿಜೆಪಿ ಶಾಸಕರೇ ಬರುತ್ತಿದ್ದಾರೆ. ಬಿಜೆಪಿಯಿಂದ ಬರುವವರಿಗೆ ಸ್ಥಾನಮಾನ ಕೊಡಲು ಆಗುತ್ತಿಲ್ಲ. ಹೀಗಾಗಿ ಸುಮ್ಮನಿದ್ದೇವೆ ಎಂದು ಹೇಳಿದರು.

ಇವತ್ತಿನಿಂದಲೇ ಬಿಜೆಪಿ ಸರ್ಕಾರದ ಕೊನೆ ಕ್ಷಣ. ಬಿಜೆಪಿ ಈ ಬಾರಿ 60ರಿಂದ 65 ಸೀಟ್ ಬರುತ್ತೆ ಅಷ್ಟೆ. ಬಿಜೆಪಿ ಹೇಗೆ ಸರ್ಕಾರ ಮಾಡಿದ್ರು . ನಮ್ಮ ಶಾಸಕರರನ್ನ ಕರೆದೊಯ್ದು ಸರ್ಕಾರ ರಚನೆ ಮಾಡಿದರು. ಇದು ಬಿಜೆಪಿ ಸರ್ಕಾರ ಅಲ್ಲ ಸಮ್ಮಿಶ್ರ ಸರ್ಕಾರ. ಸಿಎಂ ಬೊಮ್ಮಾಯಿ ಮೊದಲು ಯಾವ ಪಕ್ಷದಲ್ಲಿದ್ದರು. ಬೊಮ್ಮಾಯಿ ಜೆಡಿಎಸ್ ನಲ್ಲಿದ್ದರು ಎಂದು ಕಿಡಿಕಾರಿದರು.

Key words: not -contacted -BJP MLAs- DK Shivakumar – CM Bommai.