ಸಂಪುಟದಲ್ಲಿ ಖಾಲಿ ಸ್ಥಾನ ತುಂಬಹುದು, ಸಿಎಂ ಬದಲಾವಣೆ ಆಗಲ್ಲ- ಶಾಸಕ ಎಸ್.ಆರ್ ವಿಶ್ವನಾಥ್.

Promotion

ಬೆಂಗಳೂರು,ಡಿಸೆಂಬರ್,25,2021(www.justkannada.in):  ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುವುದಿಲ್ಲ. ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ತಿಳಿಸಿದರು.

ಈ ಕುರಿತು ಇಂದು ಮಾತನಾಡಿದ ಶಾಸಕ ಎಸ್.ಆರ್ ವಿಶ್ವನಾಥ್, ಸಿಎಂ ಬದಲಾವಣೆ ಕೇವಲ ಊಹಾಪೋಹ. ಸಚಿವ ಸಂಪುಟದಲ್ಲಿ ಖಾಲಿ ಸ್ಥಾನ ತುಂಬಹುದು. ಆದರೆ ಸಿಎಂ ಬದಲಾವಣೆ ಆಗಲ್ಲ ಎಂದರು.

ಕರ್ನಾಟಕ ಬಂದ್ ಕುರಿತು ಪ್ರತಿಕ್ರಿಯಿಸಿದ ಎಸ್.ಆರ್ ವಿಶ್ವನಾಥ್, ಬಂದ್ ನಿಂದ ಯಾವುದೇ ಪ್ರಯೋಜನವಿಲ್ಲ. ವರ್ಷದ ಕೊನೆಯ ದಿನಗಳಲ್ಲಿ ಬಂದ್ ಬೇಡವೆಂದು ಸಲಹೆ. ಕೆಲಸಂಘಟನೆಗಳು ರಾಜ್ಯ ಬಂದ್ ಬೇಡವೆನ್ನುತ್ತಿವೆ. ನಾವು ಸಹ ಸ್ವಲ್ಪ ದಿನ ಕಾಲಾವಕಾಶ ಕೊಡಬೇಕಾಗುತ್ತದೆ. ಬಳಿಕ ನಾವೆಲ್ಲರೂ ಸೇರಿ ಹೋರಾಟ ಮಾಡೋಣ ಎಂದು ಹೇಳಿದರು.

Key words:  not – CM –change-MLA- SR Vishwanath.