ಬೆಳಗಾವಿ ಭೇಟಿ ರದ್ದು ಮಾಡಿಲ್ಲ, ಮುಂದೂಡಿದ್ದೇವೆ: ಗಡಿ ವಿಚಾರದಲ್ಲಿ ರಾಜಿಯಾಗುವ ಮಾತೇ ಇಲ್ಲ-ಸಚಿವ ಶಂಭುರಾಜ್ ದೇಸಾಯಿ.

Promotion

ಬೆಳಗಾವಿ,ಡಿಸೆಂಬರ್,6,2022(www.justkannada.in):  ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಶಂಭುರಾಜ್ ದೇಸಾಯಿ  ಬೆಳಗಾವಿಗೆ ಭೇಟಿ ನೀಡುವ ಕಾರ್ಯಕ್ರಮ ರದ್ದಾಗಿದ್ದರೂ ಅವರ ಉದ್ಧಟತನದ ಹೇಳಿಕೆ  ಮತ್ತೆ ಮುಂದುವರೆದಿದೆ.

ಈ ಕುರಿತು ಮಾತನಾಡಿರುವ ಸಚಿವ ಶಂಭುರಾಜ್ ದೇಸಾಯಿ , ಮತ್ತೆ ಬೆಳಗಾವಿಗೆ ಭೇಟಿ ನೀಡುವುದಾಗಿ ಮಹಾರಾಷ್ಟ್ರ ಹೇಳಿಕೆ ನೀಡಿದ್ದಾರೆ. ಬೆಳಗಾವಿ ಗಡಿ ವಿಚಾರದಲ್ಲಿ ರಾಜಿಯಾಗುವ ಮಾತೇ ಇಲ್ಲ. ಬೆಳಗಾವಿ ಭೇಟಿ ರದ್ದು ಮಾಡಿಲ್ಲ, ಮುಂದೂಡಿದ್ದೇವೆ ಅಷ್ಟೇ. ಶೀಘ್ರದಲ್ಲೇ ಬೆಳಗಾವಿಗೆ ಭೇಟಿ ನೀಡುತ್ತೇವೆ ಎಂದು ಹೇಳಿದ್ದಾರೆ.

ಬಾಬಾ ಸಾಹೇಬ್ ಅಂಬೇಡ್ಕರ್ ಪರಿನಿರ್ವಾಣ ದಿನ ಹಿನ್ನೆಲೆ ಬೆಳಗಾವಿ ಜಿಲ್ಲೆಗೆ ಹೋಗುತ್ತಿಲ್ಲ. ಅತೀ ಶೀಘ್ರದಲ್ಲಿ ಕರ್ನಾಟಕಕ್ಕೆ ಬಂದೇ ಬರುತ್ತೇನೆ, ಭೇಟಿ ನೀಡುವ ದಿನಾಂಕವನ್ನು ಕೂಡ ಶೀಘ್ರದಲ್ಲೇ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

Key words: not canceled – visit – Belgaum-maharastra –Minister- Shambhuraj Desai