ರಾಜ್ಯದಲ್ಲಿ 2ನೇ ಡೋಸ್ ಲಸಿಕೆ ಪಡೆಯಲು ತೊಂದರೆ ಇಲ್ಲ- ಸಚಿವ ಆರ್.ಅಶೋಕ್ ಸ್ಪಷ್ಟನೆ…

Promotion

ಬೆಂಗಳೂರು,ಮೇ,11,2021(www.justkannada.in): ಕೇಂದ್ರ ಸರ್ಕಾರ ರಾಜ್ಯಕ್ಕೆ ಬೇಕಾಗುವಷ್ಟು ಲಸಿಕೆ ಕಳುಹಿಸಿದೆ. ಹೀಗಾಗಿ ರಾಜ್ಯದಲ್ಲಿ 2ನೇ ಡೋಸ್ ಲಸಿಕೆ ಪಡೆಯಲು ತೊಂದರೆ ಇಲ್ಲ ಎಂದು ಕಂದಾಯ ಸಚವ ಆರ್.ಅಶೋಕ್ ಸ್ಪಷ್ಟನೆ ನೀಡಿದ್ದಾರೆ.jk

ಈ ಕುರಿತು ಇಂದು ದೇವನಹಳ್ಳಿಯಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್,  6.5 ಲಕ್ಷ ಕೋವಿಡ್ ಲಸಿಕೆ ಸ್ಟಾಕ್ ಇದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಬೇಕಾಗುವಷ್ಟು ಲಸಿಕೆ ಕಳುಹಿಸಿದ್ದಾರೆ. ಕೊವ್ಯಾಕ್ಸಿನ್ ಸಂಗ್ರಹಣೆಯಲ್ಲಿ ಸ್ವಲ್ಪ ಸಮಸ್ಯೆಯಾಗಿದೆ.  ಆದರೆ ರಾಜ್ಯದಲ್ಲಿ 2ನೇ ಡೋಸ್ ಪಡೆಯಲು ತೊಂದರೆ ಇಲ್ಲ ಎಂದರು.No trouble - 2nd dose-vaccine – state-Minister- R. Ashok -clarified.

ಇನ್ನು ಕೇಂದ್ರ ಆರೋಗ್ಯ ಇಲಾಖೆಯು ಶೇ 70 ರಷ್ಟು ಲಸಿಕೆಯನ್ನ 2ನೇ ಡೋಸ್ ಗೆ ಮೀಸಲಿಡಿ.  ಉಳಿದ 30 ರಷ್ಟನ್ನು ಮೊದಲ ಡೋಸ್ ಗೆ ಮೀಸಲಿಡಿ. ಮೊದಲು  2ನೇ ಡೋಸ್ ಲಸಿಕೆ ನೀಡಲು ಆದ್ಯತೆ ನೀಡಿ ಎಂದು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

Key words: No trouble – 2nd dose-vaccine – state-Minister- R. Ashok -clarified.