ಪ್ರಿಯಾಂಕ್ ಖರ್ಗೆ ಬಳಿ ದಾಖಲೆ ಇಲ್ಲ: ಪ್ರಚಾರದ ಲಾಭ ಪಡೆಯುತ್ತಿದ್ದಾರೆ ಅಷ್ಟೆ-  ಗೃಹ ಸಚಿವ ಅರಗ ಜ್ಞಾನೇಂದ್ರ ಕಿಡಿ.

Promotion

ಬೆಂಗಳೂರು,ಮೇ,7,2022(www.justkannada.in):  ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆ ಬಳಿ ದಾಖಲೆ ಇಲ್ಲ. ಬರೀ ಲಾಭ ಪಡೆಯುತ್ತಿದ್ದಾರೆ ಅಷ್ಟೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಕಿಡಿಕಾರಿದರು.

ಈ ಕುರಿತು ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ತನಿಖೆ ಸರಿಯಾದ ದಾರಿಯಲ್ಲೇ ನಡೆಯುತ್ತಿದೆ. ಗೃಹ ಇಲಾಖೆಯಿಂದ ಗಂಭೀರ ತನಿಖೆ ನಡೆಯತ್ತಿದೆ. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಪಾರದರ್ಶಕವಾಗಿ ತನಿಖೆ ನಡೆಸಿ ಕ್ರಮ ಕೈಗೊಂಡಿದ್ದೇವೆ.  ಮುಖ ಮೂತಿ ನೋಡದೇ ಆರೋಪಿಗಳನ್ನ ಬಂಧಿಸಲಾಗುತ್ತಿದೆ ಎಂದರು.

ಪ್ರಿಯಾಂಕ್ ಖರ್ಗೆ ಪ್ರಚಾರದ ಲಾಭ ಪಡೆದುಕೊಳ್ಳುತ್ತಿದ್ದಾರೆ ದಾಖಲೆ ಇದ್ರೆ ಕೊಡಿ ಎಂದು ಕೇಳಿದ್ದು ತಪ್ಪಾ..?  ಪ್ರಿಯಾಂಕ್ ಯಾಕೆ  ದಾಖಲೆ ಕೊಡುತ್ತಿಲ್ಲ..? ಅವರ ಬಳಿ ದಾಖಲೆ ಇಲ್ಲ. ಅವರು ಕೇವಲ ಪ್ರಚಾರ ಪಡೆಯುತ್ತಿದ್ದಾರೆ ಎಂದು ಸಚಿವ ಅರಗ ಜ್ಞಾನೇಂದ್ರ ಆರೋಪಿಸಿದರು.

Key words: no record – Priyank Kharge- advantage publicity-Home Minister-Arag Gnanendra