ಇನ್ಮುಂದೆ ರಾಮನಗರ ಜಿಲ್ಲೆ ಇರಲ್ಲ, ಬೆಂಗಳೂರು ಜಿಲ್ಲೆ ಅಷ್ಟೆ- ಡಿಸಿಎಂ ಡಿ.ಕೆ ಶಿವಕುಮಾರ್

Promotion

ರಾಮನಗರ, ಅಕ್ಟೋಬರ್,24,2023(www.justkannada.in): ಇನ್ಮುಂದೆ ರಾಮನಗರ ಜಿಲ್ಲೆ ಇರುವುದಿಲ್ಲ. ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು ಮತ್ತೆ ಬೆಂಗಳೂರು ಜಿಲ್ಲೆಯಾಗಿ ಮರುನಾಮಕರಣ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಇಂದು ಈ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಇನ್ಮುಂದೆ ರಾಮನಗರ ಜಿಲ್ಲೆ ಇರುವುದಿಲ್ಲ ಯಾರೋ ಹೆಸರು ಮಾಡಿಕೊಳ್ಳಲು ರಾಮನಗರ ಜಿಲ್ಲೆ ರಚನೆ ಮಾಡಿದರು. ನಮ್ಮನ್ನು ರಾಮನಗರ  ಜಿಲ್ಲೆ ಅಂತಾ ಮೂಲೆಗೆ ತಳ್ಳಬೇಡಿ. ಕನಕಪುರದವರು ಬೆಂಗಳೂರು ಜಿಲ್ಲೆಯವರು ಎಂದು ಹೆಚ್.ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ವಿಜಯದಶಮಿ ದಿನ ಹೇಳುತ್ತಿದ್ದೇನೆ, ಕನಕಪುರ ಬೆಂಗಳೂರು ಜಿಲ್ಲೆಗೆ ಸೇರುತ್ತೆ. ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು ಮತ್ತೆ ಬೆಂಗಳೂರು ಜಿಲ್ಲೆಯಾಗಿ ಮರುನಾಮಕರಣ ಮಾಡಲಾಗುತ್ತದೆ. ಯಾವ ರೈತರು ಭೂಮಿ ಮಾರಾಟ  ಮಾಡಬೇಡಿ. ಒಂದೊಂದು ಅಡಿ ಲೆಕ್ಕದಲ್ಲಿ ಭೂಮಿ ಬೆಲೆ ಹೆಚ್ಚಳವಾಗುತ್ತದೆ. ಇಲ್ಲಿನ ಭೂಮಿ ಅಡಿ ಲೆಕ್ಕದಲ್ಲಿ ವ್ಯವಹಾರ ಆಗಲಿದೆ, ಭೂಮಿ ಮಾರಬೇಡಿ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

Key words: no Ramnagar –district-only -Bangalore district – DCM- DK Shivakumar