ಬಡಾವಣೆಯ ರಚನೆ ಕಾರ್ಯ ಕೈಬಿಡುವ ಯಾವುದೇ ಪ್ರಸ್ತಾವಗಳು ಪ್ರಾಧಿಕಾರದ ಮುಂದೆ ಇಲ್ಲ- ಬಿಡಿಎ ಸ್ಪಷ್ಟನೆ…

ಬೆಂಗಳೂರು,ಮಾರ್ಚ್,23,2021(www.justkannada.in):  ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಡಾ. ಕೆ. ಶಿವರಾಮಕಾರಂತ ಬಡಾವಣೆ ರಚನೆಯ ಕಾರ್ಯವು ಪ್ರಗತಿಯಲ್ಲಿದ್ದು, ಬಡಾವಣೆಯ ರೂಪುರೇಷೆಗಳನ್ನು ಪೂರ್ಣಗೊಳಿಸುವ ಕಾರ್ಯವು ಶೀಘ್ರದಲ್ಲಿಯೇ ಅಂತಿಮಗೊಳ್ಳಲಿದೆ. ಈ ಹಂತದಲ್ಲಿ ಬಡಾವಣೆಯ ರಚನೆಯ ಕಾರ್ಯವನ್ನು ಕೈಬಿಡುವ ಯಾವುದೇ ಪ್ರಸ್ತಾವಗಳು ಪ್ರಾಧಿಕಾರದ ಮುಂದೆ ಇಲ್ಲ ಎಂದು ಬಿಡಿಎ ಸ್ಪಷ್ಟಪಡಿಸಿದೆ.jk

ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವಂತೆ ಒತ್ತಾಯಿಸಿ, ಬಿಡಿಎ ವಿರುದ್ಧ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂಬ ವಿಷಯ ಮಾಧ್ಯಮಗಳ ಮೂಲಕ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರದ  ಅಧ್ಯಕ್ಷರಾದ ಎಸ್.ಆರ್. ವಿಶ್ವನಾಥ್ ಮತ್ತು ಪ್ರಾಧಿಕಾರದ ಆಯುಕ್ತ  ಡಾ. ಹೆಚ್.ಆರ್. ಮಹಾದೇವ್ರವರ ಸಮ್ಮುಖದಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಮುಖಂಡರನ್ನು ಕರೆಸಿ, ಬಡಾವಣೆಯ ರಚನೆಯ ಸಂಬಂಧ ಸರ್ವೋಚ್ಛ ನ್ಯಾಯಾಲಯವು ನೀಡಿರುವ ಆದೇಶವನ್ನು ವಿಸ್ತ್ರುತವಾಗಿ ಚರ್ಚಿಸಿ, ಭೂಸ್ವಾಧೀನಕ್ಕೊಳಪಡುವ ಭೂಮಾಲೀಕರಿಗೆ ಜಮೀನಿಗೆ ಬದಲಾಗಿ ಅಭಿವೃದ್ಧಿ ಹೊಂದಿದ ನಿವೇಶನ ಅಥವಾ ನಗದು ರೂಪದಲ್ಲಿ ಪರಿಹಾರವನ್ನು ಯಾವುದೇ ತೊಡಕು ಉಂಟಾಗದಂತೆ ಕಾಲಮಿತಿಯೊಳಗೆ ನೀಡಲಾಗುವುದು ಎಂಬ ಭರವಸೆಯನ್ನು ನೀಡಿ, ಪ್ರತಿಭಟನೆಯನ್ನು ಕೈಬಿಡುವಂತೆ ಮನವಿ ಮಾಡಲಾಗಿತ್ತು.

ಆದರೆ ಕೆಲವೊಂದು ಸಂಘಟನೆಗಳು ಸಾರ್ವಜನಿಕರನ್ನು ಒಗ್ಗೂಡಿಸಿ, ಡಾ. ಕೆ. ಶಿವರಾಮಕಾರಂತ ಬಡಾವಣೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಹಾಗೂ ಬಡಾವಣೆಯ ರಚನೆ ಕಾರ್ಯಕ್ಕೆ ತೊಡಕು ಉಂಟುಮಾಡುವ ಉದ್ದೇಶದಿಂದ ಬಿಡಿಎ ವಿರುದ್ಧ ಹೋರಾಟ ನಡೆಸಲು ಮುಂದಾಗಿವೆ ಎಂದು ತಿಳಿದುಬಂದಿದೆ. ಒಂದೊಮ್ಮೆ ಇಂತಹ ಹೋರಾಟವನ್ನು ಯಾವುದೇ ಸಂಘಟನೆ ನಡೆಸಲು ಮುಂದಾದರೆ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪಿಗೆ ವಿರುದ್ಧವಾಗಿರುತ್ತದೆ ಎಂಬ ಅಂಶವನ್ನು ಗಮನಕ್ಕೆ ತರಬಯಸುತ್ತಾ, ಹೋರಾಟಗಳನ್ನು ಕೈಬಿಟ್ಟು, ಬಡಾವಣೆಯ ರಚನೆಯ ಕಾರ್ಯಕ್ಕೆ ಸಹಕರಿಸಲು ಬಿಡಿಎ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಸರ್ವೋಚ್ಛ ನ್ಯಾಯಾಲಯವು ಡಾ. ಕೆ. ಶಿವರಾಮಕಾರಂತ ಬಡಾವಣೆಗೆ ಸಂಬಂಧಪಟ್ಟಂತೆ, ದಿನಾಂಕ 03.08.2018ಕ್ಕೆ ಮುಂಚಿತವಾಗಿ ನಿರ್ಮಿಸಲಾದ ಕಟ್ಟಡ ಮತ್ತು ಮನೆಗಳ ಬಗ್ಗೆ ವರದಿಯನ್ನು ನೀಡಲು ರಚಿಸಿರುವ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಸಮಿತಿಯು ಸಹಾಯ ಕೇಂದ್ರಗಳನ್ನು ತೆರೆದು ದಾಖಲೆಗಳನ್ನು ಸಂಗ್ರಹಿಸುತ್ತಿದೆ. ಈ ಕಾರ್ಯಕ್ಕೂ ಕೆಲವೊಂದು ವ್ಯಕ್ತಿಗಳು ಹಾಗೂ ಸಂಘಟನೆಗಳು ತೊಡಕು ಉಂಟುಮಾಡುತ್ತಿರುವುದು ಕಂಡುಬಂದಿದ್ದು, ಸಮಿತಿಯು ಈಗಾಗಲೇ ಇಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಡಾ. ಕೆ. ಶಿವರಾಮಕಾರಂತ ಬಡಾವಣೆ ರಚನೆಯ ಸಂಬಂಧ ಯಾವುದೇ ಪ್ರತಿಭಟನೆ ಹಾಗೂ ಬಡಾವಣೆ ರಚನೆಯ ಕಾರ್ಯದಲ್ಲಿ ಮಗ್ನರಾಗಿರುವ ಅಧಿಕಾರಿ/ಸಿಬ್ಬಂದಿ ವರ್ಗದವರಿಗೆ ತೊಂದರೆಯುಂಟು ಮಾಡದೇ ಬಡಾವಣೆಯ ರಚನೆ ಕಾರ್ಯಕ್ಕೆ ಸಹಕರಿಸಬೇಕೆಂದು  ಬಿಡಿಎ ಕೋರಿದೆ.

ENGLISH SUMMARY…

Attention to the Public

The Hon’ble Supreme Court of India by its order dated 03.08.2018 set aside the orders of the Hon’ble High Court and directed the BDA and Government to issue the Final Notification and proceed with the acquisition of lands for Dr. K. Shivaram Karanth Layout. In obedience of the orders of the Hon’ble Supreme Court the land acquisition process is now at the final stages. The land owners have a choice of accepting the cash compensation of fully developed sites in the BDA Layouts.

It has come to the novice of the BDA that certain individuals especially Sri Kodihalli Chandrashekar is planning an agitation on 24.03.2021 demanding of withdrawn the land acquisition proceedings of Dr. K. Shivaram Karanth Layout be dropped. In the known circumstances, if the land acquisition proceedings be dropped this would be a violation of the Supreme Court order. It is reiterated that Shivaram Karanth Layout will be formed as per the directions of the Hon’ble Supreme Court of India.

Any individual or group of individuals indulging in agitations protesting acquisition of land in Dr. K. Shivaram Karanth Layout would be guilty of disobeying the orders of Hon’ble Supreme Court with very serious consequences.

Key words: no proposals – abandon – creation -BDA -clarified.