ಸೋಮಣ್ಣ ಸೇರಿ ಯಾರೂ ಬಿಜೆಪಿ ಬಿಡಲ್ಲ, ಎಲ್ಲರೂ ನಮ್ಮ ಜೊತೆ ಇರುತ್ತಾರೆ- ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ.

Promotion

ಯಾದಗಿರಿ,ಮಾರ್ಚ್,8,2023(www.justkannada.in):  ಸಚಿವ ವಿ.ಸೋಮಣ್ಣ ಸೇರಿ ಯಾರೂ ಬಿಜೆಪಿ ಬಿಡಲ್ಲ, ಎಲ್ಲರೂ ನಮ್ಮ ಜೊತೆ ಇರುತ್ತಾರೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನುಡಿದರು.

ಯಾದಗಿರಿಯಲ್ಲಿ ಇಂದು ಮಾತನಾಡಿದ ಬಿ.ಎಸ್ ಯಡಿಯೂರಪ್ಪ,  ಯಾರೂ ಸಹ ಬಿಜೆಪಿ ಬಿಟ್ಟು ಹೋಗಲ್ಲ. ಬೆಂಗಳೂರಿಗೆ ಹೋದ ಬಳಿಕ ಎಲ್ಲರನ್ನೂ ಭೇಟಿ ಮಾಡುತ್ತೇನೆ.  ಎಲ್ಲರೂ ನಮ್ಮ ಜೊತೆಯಲ್ಲೇ ಇರುತ್ತಾರೆ ಎಂದರು.

ಮಾಡಾಳ್ ವಿರೂಪಾಕ್ಷಪ್ಪ ಉಚ್ಛಾಟನೆ ಊಹಾಪೋಹ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ  ವಾಸ್ತವ ಸ್ಥಿತಿ ಏನಿದೆ ಅನ್ನೋದು ನಿಮಗೆ ಗೊತ್ತಿದೆ. ಒಟ್ಟಿನಲ್ಲಿ ವಿರೂಪಾಕ್ಷಪ್ಪಗೆ ರಿಲೀಫ್ ಸಿಕ್ಕಿದೆ. ಮಾಡಾಳ್ ವಿರುದ್ದ ಪಕ್ಷದಿಂದ ಕ್ರಮ ಕೈಗೊಳ್ಳುವ ಕುರಿತು ನನಗೆ ಗೊತ್ತಿಲ್ಲ ಎಂದು ಬಿಎಸ್ ವೈ ತಿಳಿಸಿದರು.

Key words: No one – will- leave- BJP- Former CM-BS Yeddyurappa.