ಮೈಸೂರಿನಲ್ಲಿ ಯಾರಿಗೂ ಕೊರೋನಾ ಸೋಂಕು ಪತ್ತೆಯಾಗಿಲ್ಲ- ಜಿಲ್ಲಾಧಿಕಾರಿ ಅಭೀರಾಂ ಜೀ ಶಂಕರ್ ಸ್ಪಷ್ಟನೆ…

Promotion

ಮೈಸೂರು,ಮಾ,13,2020(www.justkannada.in):  ಕಲ್ಬುರ್ಗಿಯಲ್ಲಿ ಕೊರೋನಾ ಸೋಂಕಿನಿಂದ ವೃದ್ಧ ಮೃತಪಟ್ಟ ಹಿನ್ನೆಲೆ ರಾಜ್ಯಾದ್ಯಂತೆ ಆತಂಕ ಸೃಷ್ಠಿಯಾಗಿದ್ದು ಈ ನಡುವೆ ಮೈಸೂರಿನಲ್ಲಿ ಕೊರೋನಾ ಸೋಂಕು ಇಲ್ಲ. ಸದ್ಯ ಜಿಲ್ಲೆಯಲ್ಲಿ ಕರೊನಾ ವೈರಸ್ ಬಗ್ಗೆ ಯಾವುದೇ ಆತಂಕ ಇಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ತಿಳಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಇದುವರೆಗೂ 100ಕ್ಕೂ ಹೆಚ್ಚು ಜನರನ್ನು ತಪಾಸಣೆ ಮಾಡಲಾಗಿದೆ. ಯಾರಿಗೂ ಕರೊನಾ ವೈರಸ್ ಕಂಡುಬಂದಿಲ್ಲ. ಸೋಂಕಿತ ಅಥವಾ ಶಂಕಿತ ಪ್ರಕರಣ ಅಂತ ಯಾವುದೂ ಇಲ್ಲ. ಸಾರ್ವಜನಿಕರು ನಮ್ಮೊಟ್ಟಿಗೆ ಸಹಕಾರ ನೀಡಬೇಕು. ಕೊರೋನಾ ಭೀತಿ ಹಿನ್ನೆಲೆ ಅರಮನೆ, ಮೃಗಾಲಯ ಮುಚ್ಚುವ ಬಗ್ಗೆ ತೀರ್ಮಾನ ಮಾಡಿಲ್ಲ. ಇದುವರೆಗೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಒಂದು ವೇಳೆ ಮುಚ್ಚುವ ಅಗತ್ಯ ಬಂದರೆ ಮುಂಚಿತವಾಗಿ ಮಾಹಿತಿ ನೀಡುತ್ತೇವೆ ಎಂದು  ಹೇಳಿದರು.

ಅಂತಾರಾಷ್ಟ್ರೀಯ ಪ್ರಯಾಣ ಮುಗಿಸಿದ ಪ್ರಯಾಣಿಕರನ್ನ ತಪಾಸಣೆ ಮಾಡಲಾಗುತ್ತಿದೆ. ಶಂಕಿತನನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇಟ್ಟು ತಪಾಸಣೆ ಮಾಡಲಾಗುತ್ತಿದೆ.  ಈವರೆಗೆ ಮೂವರು ಶಂಕಿತರ ಸ್ಯಾಂಪಲ್ ಸಂಗ್ರಹ ಮಾಡಲಾಗಿದೆ ಇಬ್ಬರ ಸ್ಯಾಂಪಲ್ ವರದಿ ನೆಗೆಟಿವ್ ಎಂದು ಬಂದಿದೆ.  28 ದಿನಗಳ ಅಬ್ಸರ್ವೇಷನ್ ಮುಗಿಸಿದ ಪ್ರಯಾಣಿಕರ ಸಂಖ್ಯೆ 70. ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಿ ನಿಗಾ ಇಡಲಾಗಿದ್ದ ವ್ಯಕ್ತಿಗಳ ಸಂಖ್ಯೆ 69 ಇದೆ. ಪ್ರಸ್ತುತ ಇಬ್ಬರನ್ನ ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಿ ನಿಗಾ ಇಡಲಾಗಿದೆ. ಸದ್ಯ ಜಿಲ್ಲೆಯಲ್ಲಿ ಕರೊನಾ ವೈರಸ್ ಬಗ್ಗೆ ಯಾವುದೇ ಆತಂಕ ಇಲ್ಲ. ಇಲ್ಲಿವರೆಗೆ ಯಾರೊಬ್ಬರ ಸ್ಯಾಂಪಲ್ ಪರೀಕ್ಷೆ ಮಾದರಿ ಪಾಸಿಟಿವ್ ಬಂದಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್  ಮಾಹಿತಿ ನೀಡಿದರು.

Key words: No one – diagnosed – coronavirus –Mysore- DC-Abhiram Jee Shankar -clarified.