ರಾಜ್ಯದಲ್ಲಿ ಏಕ ಕಾಲಕ್ಕೆ ಅನ್ ಲಾಕ್ ಮಾಡುವುದು ಬೇಡ- ಡಿಸಿಎಂ ಲಕ್ಷ್ಮಣ್ ಸವದಿ.

kannada t-shirts

ಬೆಂಗಳೂರು,ಜೂ,1,2021(www.justkannada.in): ರಾಜ್ಯದಲ್ಲಿ ಏಕಕಾಲಕ್ಕೆ ಅನ್ ಲಾಕ್ ಮಾಡುವುದು ಬೇಡ. ಹಂತಹಂತವಾಗಿ ಲಾಕ್ ಡೌನ್ ತೆರವು ಮಾಡಿದರೆ ಸೂಕ್ತ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.jk

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ಲಾಕ್ ಡೌನ್ ಮಾಡಿದ ಹಿನ್ನೆಲೆ ಕೊರೊನಾ ಸೋಂಕು ಕಡಿಮೆಯಾಗಿದೆ. ಹೀಗಾಗಿ ತಜ್ಞರ ಜತೆ ಮಾತುಕತೆ ನಡೆಸಿ ನಂತರ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಸೋಂಕಿತರ ಸಂಖ್ಯೆ 5 ಸಾವಿರಕ್ಕೆ ಇಳಿಯಬೇಕು. ಆಗ ಮಾತ್ರ ಲಾಕ್ ಡೌನ್ ತೆರವು ಮಾಡಲು ಸೂಕ್ತ. ಸೋಂಕು ಕಡಿಮೆಯಾಗದಿದ್ದರೇ ಅನ್ ಲಾಕ್ ಮಾಡಲಾಗುವುದಿಲ್ಲ ಎಂದರು.

ರಾಜ್ಯದಲ್ಲಿ ಬ್ಲಾಕ್ ಫಂಗಸ್ ಗೆ ಔಷಧ ಕೊರತೆ ಇದೆ. ಔಷಧ ಪೂರೈಕೆಗೆ ಕೇಂದ್ರದ ಜತೆ ಮಾತುಕತೆ ನಡೆಸಲಾಗುತ್ತದೆ. ಡಿವಿ ಸದಾನಂದಗೌಡರು ಮಾತುಕತೆ ನಡೆಸುತ್ತಿದ್ದಾರೆ. ಆದರೆ ರೆಮ್ ಡಿಸಿವಿರ್ ಔಷಧಿಯಲ್ಲಿ ಕೊರತೆ ಇಲ್ಲ ಎಂದು ಡಿಸಿಎಂ ಲಕ್ಷ್ಮಣ್ ಸವದಿ ತಿಳಿಸಿದರು.

ಕೊರೊನಾದಿಂದ ಮೃತಪಟ್ಟ ಸಾರಿಗೆ ಸಿಬ್ಬಂದಿಗೆ ಪರಿಹಾರ ವಿಚಾರಾವಾಗಿ ಪ್ರತಿಕ್ರಿಯಿಸಿದ ಅವರು, ಎಲ್ಲರಿಗೂ ಪರಿಹಾರ ನೀಡಲು ಸಿದ್ಧ ಎಂದರು.

Key words: no need – unlock – state –corona-lockdown-DCM -Laxman Savadi.

website developers in mysore