ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಅಗತ್ಯವಿಲ್ಲ: ಮತ್ತಷ್ಟು ವಿನಾಯಿತಿಗೆ ಮನವಿ- ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ…

Promotion

ಬೆಂಗಳೂರು,ಜೂ,16,2020(www.justkannada.in):  ಕರ್ನಾಟಕದಲ್ಲಿ ಮತ್ತೊಂದು ಲಾಕ್ ಡೌನ್ ಅಗತ್ಯವಿಲ್ಲ. ಹೀಗಾಗಿ ಮತ್ತಷ್ಟು ವಿನಾಯಿತಿ ನೀಡುವಂತೆ ನಾಳೆ ವಿಡಿಯೋ ಕಾನ್ಫರೆನ್ಸ್  ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲಾಗುವುದು  ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಿಸುವ ಅಗತ್ಯವಿಲ್ಲ.ಪ್ರಧಾನಿ ಮೋದಿ ಅವರ ಜತೆ ವಿಡಿಯೋ ಕಾನ್ಫರೆನ್ಸ್ ಸಭೆ ವೇಳೆ ಹೇಳುತ್ತೇವೆ. ಮತ್ತಷ್ಚು ರಿಲ್ಯಾಕ್ಸ್ ನೀಡಿ ಜನಜೀವನ, ಆರ್ಥಿಕ ಸ್ಥಿತಿ ಸುಧಾಕರಣೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು. no-need-lockdown-again-cm-bs-yeddyurappa

ಹೊರಗಿನಿಂದ ಬಂದವರಿಂದ  ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆಯೂ ಪ್ರಧಾನಿ ಅವರಿಗೆ  ಮಾಹಿತಿ ನೀಡುತ್ತೇವೆ ರಾಜ್ಯದಲ್ಲಿ ಕೋವಿಡ್- 19 ನಿಂದ ತಪ್ಪಿಸಿಕೊಳ್ಳಲು ಅತ್ಯಂತ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

Key words: no need – lockdown- again-CM BS Yeddyurappa