ಯಾವ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡಿಲ್ಲ: ಶಾಸಕರ ಮನಸ್ಸಿಗೆ ನೋವು ಮಾಡಿದ್ರೆ ಕ್ಷಮೆಯಾಚಿಸುವುದಾಗಿ ತಿಳಿಸಿದ ಸಚಿವ ಹೆಚ್.ಡಿ ರೇವಣ್ಣ…

Promotion

ಬೆಂಗಳೂರು,ಜು,17,2019(www.justkannada.in): ನಾನು ಯಾವ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡಿಲ್ಲ. ನಾನು ಯಾವ ಶಾಸಕರ ಮನಸ್ಸಿಗೂ ನೋವು ಮಾಡಿಲ್ಲ. ನೋವು ಮಾಡಿದ್ರೆ ಕ್ಷಮೆಯಾಚಿಸುತ್ತೇನೆ ಎಂದು ಸಚಿವ ಹೆಚ್,ಡಿ ರೇವಣ್ಣ ಹೇಳಿದ್ದಾರೆ.

ಶಾಸಕರ ರಾಜೀನಾಮೆಗೆ ಸಚಿವ ಹೆಚ್.ಡಿ ರೇವಣ್ಣ ಅವರ ಧೋರಣೆಯೇ ಕಾರಣ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಹಿನ್ನೆಲೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವ ಹೆಚ್.ಡಿ ರೇವಣ್ಣ,  ಬೆಂಗಳೂರಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದೇವೆ. ಈ ನಡುವೆ ಮುಂಬೈಗೆ ಹೋದ ಮೇಲೆ ಎಲ್ಲ ಆರೋಪ ಮಾಡುತ್ತಿದ್ದಾರೆ. ಇಲ್ಲಿದ್ದಾಗ ಅವರು ನನ್ನ ಮೇಲೆ ಯಾಕೆ ಆರೋಪ ಮಾಡಿಲ್ಲ. ಅವರ ಆರೋಪಗಳಿಗೆ ಪ್ರತಿಕ್ರಿಯೆ ನೀಡಲ್ಲ. ಸಮಯ ಬಂದಾಗ ಎಲ್ಲಾ ತಿಳಿಯುತ್ತೆ ಎಂದು ತಿಳಿಸಿದರು.

ನನ್ನ ಇಲಾಖೆ ವರ್ಗಾವಣೆ ಬಿಟ್ಟು ಬೇರೆ ಇಲಾಖೆಯ ವರ್ಗಾವಣೆಯಲ್ಲಿ ಕೈ ಹಾಕಿಲ್ಲ. ನಾನು ಯಾವ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡಿಲ್ಲ. ಏನೇನು ನಡೆದಿದೆ ಅಂತಾ ಮಹಾಲಕ್ಷ್ಮೀ ತಾಯಿಗೆ ಗೊತ್ತು. ನಾನು ಯಾವ ಶಾಸಕರ ಮನಸ್ಸಿಗೂ ನೋವು ಮಾಡಿಲ್ಲ. ನೋವು ಮಾಡಿದ್ರೆ ಕ್ಷಮೆಯಾಚಿಸುತ್ತೇನೆ. ನಾರಾಯಣಗೌಡ ಅವರಿಗೆ  ನಮ್ಮ ಕುಟುಂಬದಿಂದ ಕೆಟ್ಟದು ಮಾಡಿಲ್ಲ. ನಾರಾಯಣಗೌಡರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಸಚಿವ ಹೆಚ್.ಡಿ ರೇವಣ್ಣ ಹೇಳಿದರು.

Key words: No interference – any –department- Minister –HD Revanna