ಖಾಸಗಿ ಇಂಜಿನಿಯರಿಂಗ್  ಕಾಲೇಜುಗಳ ಶುಲ್ಕ ಹೆಚ್ಚಳವಿಲ್ಲ- ಸಚಿವ ಅಶ್ವಥ್ ನಾರಾಯಣ್ ಸ್ಪಷ್ಟನೆ.

Promotion

ಬೆಂಗಳೂರು,ಸೆಪ್ಟಂಬರ್,29,2021(www.justkannada.in): ಖಾಸಗಿ ಇಂಜಿನಿಯರಿಂಗ್  ಕಾಲೇಜುಗಳ ಶುಲ್ಕ ಹೆಚ್ಚಳವಿಲ್ಲ. ಕೊರೊನಾ ಹಿನ್ನೆಲೆ ಶುಲ್ಕ ಹೆಚ್ಚಳ ಮಾಡಲ್ಲ  ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಖಾಸಗಿ ಇಂಜಿನಿಯರಿಂಗ್  ಕಾಲೇಜುಗಳಲ್ಲಿ 20,000ಕ್ಕಿಂತ ಹೆಚ್ಚು ಶುಲ್ಕವನ್ನು ತೆಗೆದುಕೊಳ್ಳುವಂತಿಲ್ಲ. ಇತರೆ ಶುಲ್ಕಗಳ ಮಿತಿ 20 ಸಾವಿರ ರೂಪಾಯಿಗೆ ನಿಗದಿ ಮಾಡಲಾಗಿದೆ. ಹೆಚ್ಚುವರಿ ಶುಲ್ಕ ಪಡೆಯದಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ನಿಗಾ ವಹಿಸಬೇಕು ಅಂತ ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪಗೆ ಡಾ.ಅಶ್ವತ್ಥ್ ನಾರಾಯಣ ಜವಾಬ್ದಾರಿ ನೀಡಿದ್ದಾರೆ.

ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಶೇ.15ರಿಂದ 20ರಷ್ಟು ಶುಲ್ಕ ಹೆಚ್ಚಳಕ್ಕೆ ಮನವಿ ನೀಡಿದ್ದವು. ಮುಂದಿನ ದಿನಗಳಲ್ಲಿ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದೇನೆ. ಖಾಸಗಿ ಕಾಲೇಜುಗಳು ಈ ನಿರ್ಧಾರಕ್ಕೆ ಸಮ್ಮತಿ ಸೂಚಿಸಿವೆ. ಸ್ಕಿಲ್ ಟ್ರೈನಿಂಗ್ ಫೀಸ್ ತೆಗೆದುಕೊಳ್ಳುವುದು ಕಡ್ಡಾಯ ಅಲ್ಲ. ವಿಟಿಯು ಭೇಟಿ ನೀಡಿ ಒಪ್ಪಿಗೆ ಕೊಟ್ಟ ಬಳಿಕ ಶುಲ್ಕ ಪಡೆಯಬೇಕು. ವಿಟಿಯು ಒಪ್ಪಿಗೆ ಇಲ್ಲದೆ ಸ್ಕಿಲ್‌ ಫೀ ಸಂಗ್ರಹಿಸುವಂತಿಲ್ಲ  ಎಂದು ತಿಳಿಸಿದ್ದಾರೆ.

Key words: no –fee- increase – private –engineering- colleges-Minister -Ashwath Narayan

ENGLISH SUMMARY…

No hike in private engineering college fee: Minister Ashwathnarayana clarifies
Bengaluru, September 29, 2021 (www.justkannada.in): Higher Education Minister Dr. C.N. Ashwathnarayana has clarified that the fees of private engineering colleges will not be hiked this year, keeping in mind the after-effects of Corona.
Speaking to the press persons today, he informed that the annual fee of private engineering colleges is restricted to Rs.20,000, and no college can collect more than that. “The Vice-Chancellor of Visveshwaraiah Technological University (VTU) Prof. Karisiddappa has been asked to monitor that no private engineering colleges will collect an additional fee,” he said.
The private engineering colleges had requested the State Government seeking permission to hike the fee by 15-20%. “I have informed that it will be discussed in the coming days, and the private colleges have agreed to it. It is not compulsory to collect a skill training fee. They should collect the fee only after VTU officials visit and permit. They cannot collect the skill fee without the permission of VTU,” he added.
Keywords: VTU/ Minister Dr. C.N. Ashwathnarayana/ Private Engineering College/ no fee hike/