ಬಿಎಸ್ ವೈ ಇಲ್ಲದೇ ಚುನಾವಣೆ ಎದುರಿಸಲ್ಲ: ಮುಂದೆ ಬಿಜೆಪಿಯೇ ಅಧಿಕಾರಕ್ಕೆ- ಸಚಿವ ಮುನಿರತ್ನ ವಿಶ್ವಾಸ.

Promotion

ಬೆಂಗಳೂರು,ಮೇ,28,2022(www.justkannada.in):  ಮುಂದಿನ ವಿಧಾನಸಭಾ ಚುನಾವಣೆಲ್ಲಿ ಬಿಜೆಪಿಯೇ ಗೆದ್ದು ಅಧಿಕಾರಕ್ಕೆ ಬಂದೇ ಬರುತ್ತದೆ. ಬಿಎಸ್ ವೈ ಇಲ್ಲದೇ ಚುನಾವಣೆ ಎದುರಿಸಲ್ಲ ಎಂದು ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಮುನಿರತ್ನ, ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಆಗುವುದಿಲ್ಲ. ಸಿಎಂ ಬದಲಾವಣೆ ಊಹಾಪೋಹ. ನಾಳೆಯೇ ಚುನಾವಣೆ ನಡೆದರೇ ಎದುರಿಸಲು ಸಿದ‍್ಧರಿದ್ದೇವೆ. 2023ಕ್ಕೆ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿವೈ ವಿಜಯೇಂದ್ರಗೆ ಪರಿಷತ್ ಚುನಾವಣೆ ಟಿಕೆಟ್ ಕೈತಪ್ಪಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಮುನಿರತ್ನ, ಈ ವಿಚಾರದಲ್ಲಿ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.

Key words: no election -without –BS yeddyurappa-Minister-Munirathna