ಎಂಎಲ್ ಸಿ ಚುನಾವಣೆ ಆಗುವವರೆಗೂ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಇಲ್ಲ- ಸಚಿವ ಜೆ.ಸಿ ಮಾಧುಸ್ವಾಮಿ.

Promotion

ತುಮಕೂರು,ಮೇ,24,2022(www.justkannada.in): ರಾಜ್ಯ ಸಚಿವ ಸಂಪುಟ  ಸೇರಲು ಕಾದು ಕುಳಿತಿರುವ ಸಚಿವಾಕಾಂಕ್ಷಿಗಳಿಗೆ ಇದೀಗ ಬಿಗ್ ಶಾಕ್. ಹೌದು, ವಿಧಾನಪರಿಷತ್ ಚುನಾವಣೆ ಮುಗಿಯುವವರೆಗೂ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯಲ್ಲವಂತೆ.

ಈ ಕುರಿತು ಸಚಿವ  ಜೆ.ಸಿ ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಾಗುವುದಿಲ್ಲ.  ವಿಧಾನಪರಿಷತ್ ಚುನಾವಣೆ ಆಗುವವರೆಗೂ ಸಂಪುಟ ವಿಸ್ತರಣೆ ಬಗ್ಗೆ  ಚರ್ಚೆ ನಡೆಯುವುದಿಲ್ಲ ಎಂದು ಮಾಧುಸ್ವಾಮಿ  ಸ್ಪಷ್ಟನೆ ನೀಡಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆ ಇನ್ನು ಒಂದು ವರ್ಷವಷ್ಟೇ ಬಾಕಿ ಇದ್ದು ಕೂಡಲೇ ಸಚಿವ  ಸಂಪುಟ ವಿಸ್ತರಿಸಿ ಸ್ಥಾನ ನೀಡುವಂತೆ ಒತ್ತಡ ಹೇರುತ್ತಿದ್ದ ಸಚಿವಾಕಾಂಕ್ಷಿಗಳ ಆಸೆಗೆ ಪರಿಷತ್ ಚುನಾವಣೆ ಅಡ್ಡಗಾಲು ಇಟ್ಟಂತಾಗಿದೆ.

Key words:  no discussion- – expansion – cabinet u-ntil – MLC election- Minister -JC Madhuswamy.