ನಾಳೆ ಪ್ರತಿಭಟನೆಗೆ ಅವಕಾಶ ಇಲ್ಲ: ನಿಯಮ ಉಲ್ಲಂಘಿಸಿದ್ರೆ ಬಂಧಿಸಿ ಜಡ್ಜ್ ಮುಂದೆ ಹಾಜರುಪಡಿಸ್ತೀವಿ- ಪೊಲೀಸ್ ಆಯುಕ್ತ ಕಮಲ್ ಪಂತ್…

ಬೆಂಗಳೂರು,ಏಪ್ರಿಲ್,6,2021(www.justkannada.in): ನಾಳೆ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ 144 ಸೆಕ್ಷನ್ ಜಾರಿ ಮಾಡಿಲಾಗಿದೆ. ನಿಯಮ ಉಲ್ಲಂಘಿಸಿದ್ರೆ ಅಂತವರನ್ನ ಬಂಧಿಸಿ ಜಡ್ಜ್ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.Illegally,Sand,carrying,Truck,Seized,arrest,driver

ನಾಳೆ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಈ ಕುರಿತು ಮಾತನಾಡಿದ ಪೊಲೀಸ್ ಆಯುಕ್ತ ಕಮಲ್ ಪಂತ್, ‘ನಾಳೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ಹೀಗಾಗಿ ನಗರದಲ್ಲಿ ಎಲ್ಲಿಯೂ ಸಹ ಗುಂಪುಗೂಡುವಂತಿಲ್ಲ. ಯಾವುದೇ ರ್ಯಾಲಿ, ಧರಣಿ ಮಾಡುವಂತಿಲ್ಲ. ಯಾವುದೇ ಸಾರ್ವಜನಿಕ ಸಮಾರಂಭ, ಗ್ರೂಪ್ ಸೆಲೆಬ್ರೇಷನ್ ಮಾಡುವಂತಿಲ್ಲ. ರಾಜ್ಯದಲ್ಲಿ ಕೋವಿಡ್‌ ಪ್ರೊಟೋಕಾಲ್‌ ಜಾರಿಯಲ್ಲಿರುತ್ತೆ. ಹಾಗಾಗಿ ಯಾರಿಗೂ ಪ್ರತಿಭಟನೆಗೆ ಅವಕಾಶವಿಲ್ಲ.  ನಿಯಮ ಉಲ್ಲಂಘಿಸಿದರೇ ಅಂತಹವರನ್ನ ಬಂಧಿಸಿ ಜಡ್ಜ್‌  ಹಾಜರುಪಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.no chance – tomorrow- protest-Arrest- in front of –Judge-bangalore- Police Commissioner - Kamal Pant.

ಪ್ರತಿಭಟನಾಕಾರರನ್ನ ಬಂಧಿಸಿ ಮುಂದೆ ಹೋಗಿ ಬಿಡಲ್ಲ. , ಪ್ರತಿಭಟನೆ ಮಾಡಿದರೇ, ಬಸ್‌, ಜನರ ಮೇಲೆ ಕಲ್ಲು ತೂರಾಟ ನಡೆಸಿದರೇ ನಾವು ಸುಮ್ಮನಿರಲ್ಲ. ರೆಗ್ಯೂಲರ್‌ ಐಪಿಸಿ ಸೆಕ್ಷನ್‌ ಪ್ರಕಾರ ಬಂಧಿಸುತ್ತೇವೆ ಮಾಡ್ತೇವೆ. ಇನ್ನು ಇದುವರೆಗೂ ನಮ್ಮ ಬಳಿ ಯಾರು ಅನುಮತಿ ಕೇಳಿಲ್ಲ. ಅನುಮತಿ ಕೇಳಿದರೂ ನೀಡುವುದಕ್ಕೆ ಆಗುವುದಿಲ್ಲ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.

Key words: no chance – tomorrow- protest-Arrest- in front of –Judge-bangalore- Police Commissioner – Kamal Pant.