ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣ: ತೀರ್ಪು ಮರುಪರಿಶೀಲನೆಗೆ ಅಪರಾಧಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ…

Promotion

ನವದೆಹಲಿ,ಡಿ,17,2019(www.justkannada.in): ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲ್ಲುಶಿಕ್ಷೆ ತೀರ್ಪು ಮರುಪರಿಶೀಲಿಸುವಂತೆ ಅಪರಾಧಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನ ಸುಪ್ರೀಂಕೋರ್ಟ್ ನಾಳೆಗೆ ಮುಂದೂಡಿದೆ.

ಗಲ್ಲು ಶಿಕ್ಷೆ ತೀರ್ಪು ಮರುಪರಿಶೀಲನೆ ಮಾಡುವಂತೆ ಅಪರಾಧಿ ಅಕ್ಷಯ್ ಅರ್ಜಿ ಸಲ್ಲಿಸಿದ್ದನು. ಆದರೆ ನಿರ್ಭಯಾ ಪರ ಸಿಜೆಐ ಎಸ್ ಎ ಬೋಬ್ಡೆ ಸಂಬಂಧಿಕರೊಬ್ಬರು ವಾದ ಮಂಡಿಸಿದ್ದರು. ಹೀಗಾಗಿ ಸಿಜೆಐ ಎಸ್ .ಎ ಬೊಬ್ಡೆ ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಈ ಹಿನ್ನೆಲೆ ಅರ್ಜಿ ವಿಚಾರಣೆಯನ್ನ ನಾಳೆ ಬೆಳಿಗ್ಗೆ 10.30ಕ್ಕೆ ಮುಂದೂಡಿಕೆ ಮಾಡಲಾಗಿದೆ.

ಅರ್ಜಿ ವಿಚಾರಣೆಗಾಗಿ ನಾಳೆ ಸಿಜೆಐ ಹೊಸಪೀಠವನ್ನ ರಚಿಸಲಿದ್ದಾರೆ. ಇನ್ನು ಅಪರಾಧಿಗಳಿಗೆ ಬೇಗ ಗಲ್ಲುಶಿಕ್ಷೆ ವಿಧಿಸುವಂತೆ ಕೋರಿ ನಿರ್ಭಯಾ ಪೋಷಕರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. 2012 ಡಿಸೆಂಬರ್ 16 ರಂದು ನಿರ್ಭಯಾ ಮೇಲೆ ಅಪರಾಧಿಗಳು ಅತ್ಯಾಚಾರವೆಸಗಿ ಕೊಲೆ ಪ್ರಕರಣ ನಡೆದಿತ್ತು.  ಪ್ರಕರಣ ಸಂಬಂಧ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ.

Key words: Nirbhaya rape and murder case-guilty – hearing -tomorrow