ನಿರ್ಭಯ ಗ್ಯಾಂಗ್ ರೇಪ್ ಕೊಲೆ ಪ್ರಕರಣ: ಸದ್ಯದ ಪರಿಸ್ಥಿತಿ ಕುರಿತು ವರದಿ ನೀಡುವಂತೆ ಜೈಲು ಅಧಿಕಾರಿಗಳಿಗೆ ಕೋರ್ಟ್ ಆದೇಶ…

Promotion

ನವದೆಹಲಿ,ಜ,16,2020(www.justkannada.in):  ನಿರ್ಭಯಾ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿಗಳಿಗೆ ಜನವರಿ 22ರಂದು ಗಲ್ಲುಶಿಕ್ಷೆ ವಿಧಿಸಲಾಗಿದೆ. ಈ ನಡುವೆ ಅಪರಾಧಿಗಳನ್ನ ಗಲ್ಲಿಗೇರಿಸುವ ಸ್ಥಿತಿ ಗತಿಗಳ ಬಗ್ಗೆ ವರದಿ ನೀಡಬೇಕು ಎಂದು ತಿಹಾರ್ ಜೈಲು ಅಧಿಕಾರಿಗಳಿಗೆ ದೆಹಲಿ ಪಟಿಯಾಲ ಹೌಸ್ ಕೋರ್ಟ್ ಆದೇಶ ನೀಡಿದೆ.

ನಾಲ್ವರು ಅಪರಾಧಿಗಳ ಪೈಕಿ ಮುಖೇಶ್ ಸಿಂಗ್ ಗಲ್ಲುಶಿಕ್ಷೆಗೆ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದ್ದು, ಪಟಿಯಾಲ ಹೌಸ್ ಕೋರ್ಟ್ ನಲ್ಲಿ ಅರ್ಜಿಯ ವಿಚಾರಣೆ ನಡೆಯಿತು. ಅರ್ಜಿಯ ವಿಚಾರಣೆ ವೇಳೆ ವಾದ ಮಂಡಿಸಿದ ಆಮಿಕಸ್ ಕ್ಯೂರಿ ವೃಂದಾಗ್ರೋವರ್,  ಅಪರಾಧಿ ಮುಖೇಶ್ ರಾಷ್ಟ್ರಪತಿ ಹಾಗೂ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದಾನೆ. ಹೀಗಾಗಿ ಡೆತ್ ವಾರೆಂಟ್ ಗೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಲಾಗಿದೆ ಎಂದು ಕೋರ್ಟ್ ಗೆ ಮನವಿ ಮಾಡಿದರು.

ವಾದ ಆಲಿಸಿದ ಪಟಿಯಾಲ ಹೌಸ್ ಕೋರ್ಟ್ ಡೆತ್ ವಾರೆಂಟ್ ಗೆ ತಡೆಯಾಜ್ಞೆ ನೀಡುವ ಅಗತ್ಯವಿಲ್ಲ. ತಿಹಾರ್ ಜೈಲಿನ ಅಧಿಕಾರಿಗಳು ಸದ್ಯದ ಪರಿಸ್ಥಿತಿ ಕುರಿತು  ನಾಳೆಯೇ ವರದಿ ನೀಡಲಿ ಎಂದು ಸೂಚಿಸಿತು. ಅಲ್ಲದೇ, ಹೊಸ ವಾರೆಂಟ್ ಹೊರಡಿಸಲು ಕೋರ್ಟ್ ನಲ್ಲಿ ಮನವಿ ಮಾಡಿಕೊಳ್ಳಲಿ ಎಂದು ಕೋರ್ಟ್ ಸೂಚಿಸಿತು.

ಮುಕೇಶ್ ಸಲ್ಲಿಸಿರುವ ಕ್ಷಮದಾನ ಅರ್ಜಿಯನ್ನ ಕೇಂದ್ರ ಗೃಹ ಇಲಾಖೆಗೆ ರವಾನೆ ಮಾಡಲಾಗಿದ್ದು ಕೇಂದ್ರ ಗೃಹ ಇಲಾಖೆ  ರಾಷ್ಟ್ರಪತಿಗೆ ಅರ್ಜಿ ಕಳುಹಿಸಲಿದೆ.

Key words: Nirbhaya -gang rape -murder case- report – current –newdehli-court