ನಿರ್ಭಯಾ ಗ್ಯಾಂಗ್ ರೇಪ್, ಕೊಲೆ ಕೇಸ್: ವಿಚಾರಣೆ ಡಿ.18ಕ್ಕೆ ಮುಂದೂಡಿದ ದೆಹಲಿ ಕೋರ್ಟ್…

Promotion

ನವದೆಹಲಿ,ಡಿ,13,2019(www.justkannada.in): ನಿರ್ಭಯಾ ಗ್ಯಾಂಗ್ ರೇಪ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಭಯಾ ಪೋಷಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ದೆಹಲಿ ಪಟಿಯಾಲ ಹೌಸ್ ಕೋರ್ಟ್ ಡಿಸೆಂಬರ್ 18ಕ್ಕೆ ಮುಂದೂಡಿದೆ.

ನಿರ್ಭಯ ಅತ್ಯಾಚಾರಿ ಆರೋಪಿಗಳಿಗೆ ಆದಷ್ಟು ಬೇಗ ಗಲ್ಲುಶಿಕ್ಷೆ ಜಾರಿಗೊಳಿಸುವಂತೆ ಕೋರಿ ದೆಹಲಿ ಕೋರ್ಟ್ ಗೆ ನಿರ್ಭಯಾ ಪೋಷಕರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಡಿ.18 ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.

ನಿರ್ಭಯಾ ಅತ್ಯಾಚಾರ ಪ್ರಕರಣದ ದೋಷಿಗಳಿಗೆ ಸಧ್ಯದಲ್ಲೇ ಗಲ್ಲುಶಿಕ್ಷೆ ಘೋಷಣೆಯಾಗುವ ಸಾಧ್ಯತೆ  ಇದೆ. ಈ ನಡುವೆ ಪ್ರಕರಣದ ಅಪರಾಧಿ   ಅಕ್ಷಯ್ ಕುಮಾರ್  ಮರುಪರಿಶೀಲನೆಗಾಗಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಡಿಸೆಂಬರ್ 17 ರಂದು ಈ ಅರ್ಜಿ ವಿಚಾರಣೆ ನಡೆಯಲಿದೆ. ಹೀಗಾಗಿ  ನಿರ್ಭಯಾ ಪೋಷಕರ ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಡಿ. 18 ಕ್ಕೆ ಮುಂದೂಡಿದೆ.

 

Key words: Nirbhaya- gang-rape -murder -case: Delhi court- adjourned –hearing- December 18