ನಿರ್ಭಯಾ ಗ್ಯಾಂಗ್ ರೇಪ್, ಕೊಲೆ ಪ್ರಕರಣ: ಅಪರಾಧಿ ವಿನಯ್ ಶರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ವಜಾ…

Promotion

ನವದೆಹಲಿ,ಫೆ,1,2020(www.justkannada.in): ನಿರ್ಭಯಾ ಗ್ಯಾಂಗ್ ರೇಪ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ವಿನಯ್ ಶರ್ಮಾ ಸಲ್ಲಿಸಿದ್ದ ಕ್ಷಮದಾನ ಅರ್ಜಿಯನ್ನ ರಾಷ್ಟ್ರಪತಿಗಳು ವಜಾಮಾಡಿದ್ದಾರೆ.

ಅಪರಾಧಿ ವಿನಯ್ ಶರ್ಮಾ ಕ್ಷಮಾದಾನ ಕೋರಿ  ರಾಷ್ಟ್ರಪತಿಗೆ ಅರ್ಜಿಸಲ್ಲಿಸಿದ್ದನು. ಇನ್ನು ಅಪರಾಧಿ ವಿನಯ್ ಶರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ತಿರಸ್ಕರವಾಗಿದೆ. ನಿರ್ಭಯಾ ಹಂತಕರ ಪೈಕಿ ಮುಕೇಶ್‌ ಕುಮಾರ್‌ ಸಿಂಗ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿರುವ ಬೆನ್ನಲ್ಲೇ ವಿನಯ್‌ ಶರ್ಮ ಸಹ ಕ್ಷಮದಾನ ಅರ್ಜಿ ಸಲ್ಲಿಸಿದ್ದ,

ವಿನಯ್ ಕ್ಷಮದಾನ ಅರ್ಜಿ ಬಾಕಿ ಇದ್ದ ಹಿನ್ನೆಲೆ ಇಂದು ಬೆಳಿಗ್ಗೆ ನಾಲ್ವರು ಅಪರಾಧಿಗಳಿಗೆ ನಿಗದಿಯಾಗಿದ್ದ ಗಲ್ಲುಶಿಕ್ಷೆ ಜಾರಿಗೆ ನಿನ್ನೆ ದೆಹಲಿ ಪಟಿಯಾಲ ಹೌಸ್ ಕೋರ್ಟ್ ತಡೆ ನೀಡಿದೆ. ಮುಂದಿನ ಆದೇಶದವರೆಗೆ ಅಪರಾಧಿಗಳಿಗೆ ಗಲ್ಲುಶಿಕ್ಷೆ ಜಾರಿ ಇಲ್ಲ ಎಂದು ತಿಳಿಸಿದೆ.

Key words:Nirbhaya -gang rape- murder case-Appeal- Vinay Sharma-petition- dismissed.