ಅಪ್ಪ-ಅಜ್ಜನಾಗುವ ಸಂಭ್ರಮದಲ್ಲಿರುವ ನಿಖಿಲ್-ಕುಮಾರಸ್ವಾಮಿ

Promotion

ಬೆಂಗಳೂರು, ಜೂನ್ 22 (www.justkannada.in): ನಿಖಿಲ್ ಕುಮಾರಸ್ವಾಮಿ ತಂದೆಯಾಗುತ್ತಿದ್ದಾರೆ. ಹೌದು, ಪತ್ನಿ ರೇವತಿ ಈಗ ಐದು ತಿಂಗಳ ಗರ್ಭಿಣಿ.

ರೇವತಿ ಅವರ ಹುಟ್ಟುಹಬ್ಬವಿದ್ದು ಇಂದೇ ಈ ಸಿಹಿ ಸುದ್ದಿ ಹೊರಬಿದ್ದಿದೆ. ಮಾಜಿ ಸಿಎಂ ಕುಮಾರಸ್ವಾಮಿ ಅವರೇ ಮಾಧ್ಯಮವೊಂದಕ್ಕೆ ಖಾತ್ರಿ ಪಡಿಸಿದ್ದಾರೆ. ನಿಖಿಲ್ ಹಾಗೂ ರೇವತಿ ಕಳೆದ ವರ್ಷ ಏಪ್ರಿಲ್ 17 ರಂದು ವಿವಾಹವಾಗಿದ್ದರು.

ಅಂದಹಾಗೆ ಪತ್ನಿಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿರುವ ನಿಖಿಲ್ ಇಬ್ಬರೂ ಒಟ್ಟಿಗಿರುವ ಹಳೆಯ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಇತ್ತೀಚಿಗೆ ನಿಖಿಲ್ ತಮ್ಮನ್ನು ತೊಡಗಿಸಿಕೊಂಡಿದ್ದು, ಸಿನಿಮಾ ಜೊತೆಗೆ ಕೃಷಿ ಸಹ ಮಾಡಲು ತೊಡಗಿದ್ದಾರೆ. Nikhil Kumaraswamy –tested- Corona Positive.