ನಿಖಿಲ್ ‘ರೈಡಿಂಗ್’ಗೆ ಏನಂದ್ರು ಪ್ರೇಕ್ಷಕ ಮಹಾಪ್ರಭುಗಳು…?

Promotion

ಬೆಂಗಳೂರು, ಡಿಸೆಂಬರ್ 24, 2021 (www.justkannada.in): ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ.

ನೆನ್ನೆ ಅನುಪಮ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ನಿಖಿಲ್ ಚಿತ್ರ ನೋಡಿದ್ದು, ನಂತರ ಮಧ್ಯಾಹ್ನದ ನಂತರ ಬೆಂಗಳೂರಿನ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದರು.

ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಅಭಿನಯಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಚಿತ್ರದ ಕುರಿತು ಒಳ್ಳೆಯ ಮಾತುಗಳು ಕೇಳಿ ಬರುತ್ತಿದ್ದು, ವರ್ಷದ ಕೊನೆಯಲ್ಲಿ ಬಿಡುಗಡೆಯಾಗಿರುವ ರೈಡರ್ ಒಂದಷ್ಟು ಒಳ್ಳೆಯ ಗಳಿಕೆ ಮಾಡುವ ಪ್ರಯತ್ನದಲ್ಲಿದೆ.

ಚಿತ್ರ ಬಿಡುಗಡೆಯಾದ ನಿನ್ನೆ ನಿಖಿಲ್ ಬೆಂಗಳೂರಿನ ಆನಂದರಾವ್ ವೃತ್ತದಿಂದ ಅನುಪಮ ಚಿತ್ರಮಂದಿರಕ್ಕೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.