ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಅನಗತ್ಯವಾಗಿ ಓಡಾಡಿದ್ರೆ ಕ್ರಮ- ಮೈಸೂರು ಪೊಲೀಸ್ ಆಯುಕ್ತ ರಮೇಶ್ ಬಾನೋತ್.

Promotion

ಮೈಸೂರು,ಡಿಸೆಂಬರ್,31,2022(www.justkannada.in):  ಹೊಸ ವರ್ಷಾಚರಣೆ ಸಂಭ್ರಮಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದು ಈ ನಡುವೆ ಹೊಸ ವರ್ಷ ಸಂಭ್ರಮಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದೆ.

ಮೈಸೂರಿನಲ್ಲಿ ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷ ಆಚರಣೆಗೆ ಅವಕಾಶ ನೀಡಲಾಗಿದ್ದು ನಂತರ ಅನವಶ್ಯವಾಗಿ ಓಡಾಡಿದರೇ ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ರಮೇಶ್ ಬಾನೋತ್, ರಾತ್ರಿ 12.30ರೊಳಗೆ  ಎಲ್ಲಾ ಪಾರ್ಟಿಗಳು ಮುಗಿಯಬೇಕು ಮಧ್ಯರಾತ್ರಿ ಒಂದು ಗಂಟೆ  ನಂತರ ಅನವಶ್ಯಕವಾಗಿ ಓಡಾಡಿದರೇ ಕ್ರಮ ಕೈಗೊಳ್ಳಲಾಗುತ್ತದೆ. 1 ಗಂಟೆ ನಂತರ ನಗರದಲ್ಲಿ ಡ್ರಂಕ್ ಅಂಡ್ ಡ್ರೈವ್  ತಪಾಸಣೆ ಮಾಡಲಾಗುತ್ತದೆ.  ಅನುಮತಿ ಪಡೆದ ಹೋಟೆಲ್ ಗಳಿಗೆ 1ರವರೆಗೆ ಮಾತ್ರ ಅವಕಾಶ ನೀಡಲಾಗಿದೆ ಎಂದರು.

ಹಾಗೆಯೇ  ಸೆಲೆಬ್ರೇಷನ್ ನೆಪದಲ್ಲಿ ಗಲಾಟೆ ಮಾಡಿದರೇ ಕ್ರಮ ಕೈಗೊಳ್ಳುತ್ತೇವೆ. ಚಾಮುಂಡಿಬೆಟ್ಟಕ್ಕೂ ಇಂದು ನಿರ್ಬಂಧ ವಿಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ  ರಮೇಶ್ ಬಾನೋತ್  ಹೇಳಿದರು.

Key words: New Year- celebration – till 1 am-Mysore -Police –Commissioner- Ramesh Banoth.