ಹೊಸ ಸಂಪ್ರದಾಯ ಹುಟ್ಟು ಹಾಕೋದು ಬೇಡ- ಸರ್ಕಾರಕ್ಕೆ ವಿಪಕ್ಷ  ನಾಯಕ ಸಿದ್ಧರಾಮಯ್ಯ ಸಲಹೆ.

kannada t-shirts

ಬೆಂಗಳೂರು,ಸೆಪ್ಟಂಬರ್,23,2021(www.justkannada.in):  ನಾಳೆ ವಿಧಾನಮಂಡಲ  ಜಂಟಿ ಅಧಿವೇಶನದಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಂದ  ಭಾಷಣ ಮಾಡಿಸಲು ಮುಂದಾದ ಹಿನ್ನೆಲೆ  ಹೊಸ ಸಂಪ್ರದಾಯ ಹುಟ್ಟು ಹಾಕೋದು ಬೇಡ. ಸದನದಲ್ಲಿ ಜನ ಸಾಮಾನ್ಯರ ಸಮಸ್ಯೆಗಳು ಚರ್ಚೆಯಾಗಲಿ ಎಂದು ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಸಲಹೆ ನೀಡಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, 4 ವಾರ ಕಲಾಪ ನಡೆಸಲು ಹೇಳಿದ್ದವು. ಒಂದು ವಾರನಾದ್ರೂ ಕಲಾಪ ವಿಸ್ತರಣೆ ಮಾಡಲು ಮನವಿ ಮಾಡಿದ್ದವು. ಆದರೆ ಸರ್ಕಾರ ಒಪ್ಪುತ್ತಿಲ್ಲ ನಾನೇನು ಮಾಡಲಿ ಎಂದು ಸ್ಪೀಕರ್ ಕಾಗೇರಿ ಹೇಳ್ತಾರೆ ಎಂದು ಟೀಕಿಸಿದರು.

ಆರು ತಿಂಗಳ ಬಳಿಕ ಕಲಾಪ ನಡೆಸುತ್ತಿದ್ದಾರೆ. ಹೀಗಾಗಿ  ಸದನದಲ್ಲಿ ಜನ ಸಾಮಾನ್ಯರ ಸಮಸ್ಯೆಗಳು ಚರ್ಚೆಯಾಗಲಿ. ಆದರೆ ನಾಳೆ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಸ್ಪೀಕರ್ ಓಂ ಬಿರ್ಲಾ ಭಾಷಣ ಸರಿಯಲ್ಲ.  ಇದು ಸಂಪ್ರದಾಯಕ್ಕೆ ವಿರುದ್ಧವಾದದ್ದು ಇಂತಹದನ್ನ ನಾನು ರಾಜಕೀಯದಲ್ಲಿ ನೋಡಿಲ್ಲ. ಹೀಗಾಗಿ ನಾಳೆ ಕಲಾಪ ಬಹಿಷ್ಕರಿಸುತ್ತೇವೆ ಎಂದು ಸಿದ್ಧರಾಮಯ್ಯ ಹೇಳಿದರು.

Key words:  new- tradition-  Opposition leader –Siddaramaiah- advice – government.

website developers in mysore