ಹೊಸ ಶಾಲಾ ನೋಂದಣಿ, ಮಾನ್ಯತೆ ನವೀಕರಣ ಎಲ್ಲವೂ ಆನ್ ಲೈನ್: ಅಕ್ರಮ ಶಾಲೆಗಳ ವಿರುದ್ಧ ಕ್ರಮ-ಸಚಿವ ಬಿ.ಸಿ ನಾಗೇಶ್.

Promotion

ಮೈಸೂರು,ಮಾರ್ಚ್,3,2023(www.justkannada.in): ಖಾಸಗಿ ಶಾಲೆಗಳ NOC, ನವೀಕರಣ ಪತ್ರ, ನೋಂದಣಿ ಸೇರಿದಂತೆ ಎಲ್ಲಾ ಪ್ರಕ್ರಿಯೆಗೆ ತಡವಾಗುತ್ತಿತ್ತು. ಹೀಗಾಗಿ ಈ ವ್ಯವಸ್ಥೆಯನ್ನ ಸರಳೀಕೃತ ಮಾಡಿದ್ದೇವೆ. ಈಗ ಎಲ್ಲವನ್ನು ಆನ್ ಲೈನ್ ಸೇವೆಯ‌ ಮೂಲಕ ಕೊಡಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್,  ಖಾಸಗಿ ಶಾಲೆಗಳು NOC, ನವೀಕರಣ ಪತ್ರ, ನೋಂದಣಿ ಸೇರಿದಂತೆ ಎಲ್ಲಾ ಪ್ರಕ್ರಿಯೆಗೆ ತಡವಾಗುತ್ತಿತ್ತು. ಅದ್ದರಿಂದ ಎಲ್ಲವನ್ನು ಆನ್ ಲೈನ್ ಸೇವೆಯ‌ ಮೂಲಕ ಕೊಡಲಾಗ್ತಿದೆ. ಪ್ರತಿಯೊಂದು ಪ್ರಕ್ರಿಯೆ ಮೊದಲು 8 ಹಂತದಲ್ಲಿ ಇತ್ತು. ಈಗ 4 ಹಂತಕ್ಕೆ ಇಳಿಸಿದ್ದೇವೆ. ಮೊದಲು 27 ದಿನ ಸಮಯ ಆಗುತ್ತಿತ್ತು. ಈಗ 17 ದಿನಕ್ಕೆ ಪ್ರಕ್ರಿಯೆ ಮುಗಿಸುತ್ತಿದ್ದೇವೆ. ಎಲ್ಲವೂ ಆನ್ ಲೈನ್ ವ್ಯವಸ್ಥೆ ಮಾಡಿದ್ದೇವೆ. ಅರ್ಜಿಯ ಮಾಹಿತಿ ಬಗ್ಗೆ ಮೆಸೇಜ್ ಮೂಲಕ ಅರ್ಜಿದಾರನಿಗೆ ರವಾನೆ ಮಾಡಲಾಗುತ್ತದೆ. ಡಿಜಿಟಲ್ ಸಹಿ ಮೂಲಕ ಎಲ್ಲಾ ಮಾನ್ಯತೆ ಕೊಡುವ ಪ್ರಕ್ರಿಯೆ ಮಾಡುತ್ತಿದ್ದೇವೆ. ಹೊಸ ಶಾಲಾ ನೋಂದಣಿ, ಮಾನ್ಯತೆ ನವೀಕರಣ, ಪಠ್ಯಕ್ರಮದ NOC, ಶಾಲೆಗಳ ಮಾಹಿತಿ ದತ್ತಾಂಶ ಸಂಗ್ರಹಣೆ ಆನ್ ಲೈನ್ ಮೂಲಕವೇ ನೀಡಲಾಗುತ್ತದೆ. ಶಾಲೆಗೆ ಹೋಗುವ 3 ಜನರ ಕಮಿಟಿಯೂ ಇನ್ನು ಮುಂದೆ 5% ಶಾಲೆಗಳಿಗೆ ಮಾತ್ರ ಭೌತಿಕ ಪರಿಶೀಲನೆ ಮಾಡುತ್ತದೆ. ಉಳಿದ ಶಾಲೆಗಳಿಗೆ ಅನ್ ಲೈನ್ ಮೂಲಕ ಮಾಹಿತಿ ಪಡೆಯುತ್ತೇವೆ. ಡಿಡಿಪಿಐಗಳಿಗೆ ವಿಶೇಷ ಅಧಿಕಾರ ಶಿಕ್ಷಣ ಇಲಾಖೆ ಕೊಡುತ್ತಿದೆ ಎಂದು ತಿಳಿಸಿದರು.

ಅಕ್ರಮ ಶಾಲೆಗಳ ವಿರುದ್ಧ ನಿಯಮದ ಪ್ರಕಾರ ಕ್ರಮ

ಅಕ್ರಮ ಶಾಲೆಗಳ ವಿರುದ್ಧ ನಿಯಮದ ಪ್ರಕಾರ ಕ್ರಮ  ತೆಗೆದುಕೊಳ್ಳುತ್ತೇವೆ.ಪರೀಕ್ಷೆ ಮುಗಿದ ಮೇಲೆ ಈ ಪ್ರಕ್ರಿಯೆಗೆ ಚಾಲನೆ ಕೊಡುತ್ತೇವೆ. ಮಕ್ಕಳಿಗೆ ತೊಂದರೆ ಆಗದಂತೆ ಕ್ರಮಕ್ಕಾಗಿ ಸ್ವಲ್ಪ ತಡವಾಗಿದೆ ಕ್ರಮ ತೆಗೆದುಕೊಳ್ಳುತ್ತೇವೆ. ಅಕ್ರಮ ಶಾಲೆಗಳನ್ನ ಗುರುತಿಸಲಾಗಿದೆ. ಅವರಿಗೆ ನೊಟೀಸ್ ನೀಡಲಾಗಿದೆ. ಪರೀಕ್ಷೆ ಇದೆ. ಈಗ ಕ್ರಮ ಆದ್ರೆ ಮಕ್ಕಳಿಗೆ ಸಮಸ್ಯೆ ಆಗುತ್ತೆ. ಹೀಗಾಗಿ ಪರೀಕ್ಷೆ ಮುಗಿದ ಮೇಲೆ ಅಕ್ರಮ ಶಾಲೆಗಳ ವಿರುದ್ಧ ಕ್ರಮ ತಗೋತೀವಿ. ಮುಂದಿನ ವರ್ಷದಿಂದ ಶಾಲೆಗಳ ಬಗ್ಗೆ ವೆಬ್ ಸೈಟ್ ನಲ್ಲಿ ಮಾಹಿತಿ  ಹಾಕುತ್ತೇವೆ. ಪೋಷಕರು ಅದನ್ನ ನೋಡಿಕೊಂಡು ಶಾಲೆಗೆ ಸೇರಿಸಬೇಕು ಎಂದು ಸಲಹೆ ನೀಡಿದರು.

10 ಮತ್ತು 12 ನೇ ತರಗತಿಗೆ ಪರೀಕ್ಷೆ ಮುಂಚೆ ಗ್ರೇಸ್ ಮಾರ್ಕ್ಸ್ ಕೊಡುವ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ. ಹಿಂದೆ ಇದ್ದ ನಿಯಮದ ಪ್ರಕಾರವೇ ಗ್ರೇಸ್ ಮಾರ್ಕ್ಸ್ ಬಗ್ಗೆ ತೀರ್ಮಾನ ಆಗುತ್ತದೆ. ಈ ಬಾರಿ ವಿದ್ಯಾರ್ಥಿಗಳಿಗೆ ಅನುಕೂಲ ಆಗಲು ಬಹು ಆಯ್ಕೆ ಪ್ರಶ್ನೆಗಳನ್ನ ನೀಡಲಾಗುತ್ತಿದೆ ಎಂದರು.

ಮಾರ್ಚ್ 9ನೇ ತಾರೀಖಿನಿಂದ ದ್ವೀತಿಯ ಪಿಯುಸಿ ಪ್ರಾರಂಭ ಆಗುತ್ತದೆ. ಜಿಲ್ಲೆಗಳಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಕಳೆದ ವರ್ಷದಂತೆ ಈ ವರ್ಷವೂ ಉತ್ತಮವಾಗಿ ಪರೀಕ್ಷೆ ಆಯೋಜನೆ ಮಾಡ್ತೀವಿ. ಅರ್ಧ ಗಂಟೆ ಮುಂಚಿತವಾಗಿ ಈ ಬಾರಿ ಮಕ್ಕಳಿಗೆ ಪರೀಕ್ಷಾ ಕೇಂದ್ರಕ್ಕೆ ಬಿಡುತ್ತೇವೆ. ಮಕ್ಕಳ ಸ್ನೇಹಿಯಾಗಿ ಪರೀಕ್ಷೆ ಮಾಡುತ್ತೇವೆ. ಪರೀಕ್ಷೆ ವೇಳೆ ಎಲೆಕ್ಟ್ರಾನಿಕ್ ವಸ್ತುಗಳು ನಿಷೇಧ ಮಾಡಲಾಗಿದೆ. ಪೊಲೀಸ್ ಭದ್ರತೆ ಇರಲಿದೆ.ಯಾವುದೇ ಅಕ್ರಮ ಆಗದಂತೆ ಕ್ರಮವಹಿಸಲಾಗಿದ್ದು, ಸೂಕ್ಷ್ಮ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮಾಡುತ್ತೇವೆ ಎಂದು ಬಿಸಿ ನಾಗೇಶ್ ತಿಳಿಸಿದರು.

Key words: New school –registration- renewal – all –online-Minister- BC Nagesh.