ಹೊಸ ನಿಯಮ: ಟೆಸ್ಟ್ ಚಾಂಪಿಯನ್’ಶಿಪ್’ನಲ್ಲಿ 2ನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ

Promotion

ದುಬೈ, ನವೆಂಬರ್ 20, 2020 (www.justkannada.in): ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಅಂಕಪಟ್ಟಿಗೆ ಸಂಬಂಧಪಟ್ಟಂತೆ ಹೊಸ ನಿಯಮವನ್ನು ಐಸಿಸಿ ಅಳವಡಿಸಿಕೊಂಡಿದೆ.

ಈ ಅಂಕಪಟ್ಟಿ ನಿಯಮದ ಪ್ರಕಾರ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಅಂಕಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನಕ್ಕೆ ಕುಸಿದಿದೆ. ಈ ನಿಯಮಕ್ಕೂ ಮೊದಲು ಭಾರತ ಮೊದಲ ಸ್ಥಾನವನ್ನು ಪಡೆದುಕೊಂಡಿತ್ತು. ಈಗ ಈ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ.

ಕೊರೊನಾ ವೈರಸ್‌ನಿಂದಾಗಿ ಅಂದುಕೊಂಡಂತೆ ಟೆಸ್ಟ್ ಸರಣಿಗಳನ್ನು ಆಯೋಜಿಸಲು ಸಾಧ್ಯವಾಗದ ಕಾರಣ ಈ ಹೊಸ ನಿಯಮವನ್ನು ಅಳವಡಿಸಿಕೊಳ್ಳಲು ಐಸಿಸಿ ನಿರ್ಧಾರ ಮಾಡಿದೆ.

ಭಾರತದ ಮಾಜಿ ಟೆಸ್ಟ್ ನಾಯಕ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿಯು ಆಡಳಿತ ಮಂಡಳಿಗೆ ಈ ತಿದ್ದುಪಡಿಯನ್ನು ಪ್ರಸ್ತಾಪಿಸಿತ್ತು. ಕೊರೊನಾ ವೈರಸ್ ಜಾಗತಿಕವಾಗಿ ಕ್ರಿಕೆಟ್ ಕ್ಯಾಲೆಂಡರ್‌ಗಳಲ್ಲಿ ದೊಡ್ಡ ಅಡ್ಡಿ ಉಂಟುಮಾಡಿದೆ.