ಮಹಾರಾಷ್ಟ್ರದಲ್ಲಿ ಹೊಸ ಓಮಿಕ್ರಾನ್ ಉಪತಳಿಗಳು ಪತ್ತೆ.

ಮುಂಬೈ, ಅಕ್ಟೋಬರ್ 19, 2022(www.justkannada.in): ಮಹಾರಾಷ್ಟ್ರ ರಾಜ್ಯದಲ್ಲಿ ಹಿಂದಿನ ವಾರದ ಹೋಲಿಕೆಯಲ್ಲಿ ಈ ವಾರ ಕೊರೋನಾ ವೈರಾಣು ಪ್ರಕರಣಗಳ ಪ್ರಮಾಣ ಶೇ.೧೭.೭ರಷ್ಟು ಏರಿಕೆಯಾಗಿರುವುದಾಗಿ ಮಹಾರಾಷ್ಟ್ರ ಆರೊಗ್ಯ ಇಲಾಖೆ ಮಾಹಿತಿ ನೀಡಿದೆ.

ಮಹಾರಾಷ್ಟ್ರ ರಾಜ್ಯ ಸರ್ಕಾರ, ಭಾರತದಲ್ಲಿ ಕೇರಳ ಒಳಗೊಂಡಂತೆ ಇತರೆ ರಾಜ್ಯಗಳಲ್ಲಿ ಇತ್ತೀಚೆಗೆ ಪತ್ತೆಯಾಗಿರುವ ಸರ್ಸ್ಷ-ಕೋವ್-೨ ವೈರಾಣುವಿನ ಓಮಿಕ್ರಾನ್ ತಳಿಯ ಹೊಸ ಉಪತಳಿ ಎಕ್ಸ್ಬಿಬಿ ಒಳಗೊಂಡಂತೆ, ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿರುವುದಾಗಿ ತಿಳಿಸಿದೆ.

ಇದಲ್ಲದೆ, ಮಹಾರಾಷ್ಟ್ರ ಓಮಿಕ್ರಾನ್ ಬಿಎ.೨.೩.೨೦ ಹಾಗೂ ಬಿಕ್ಯೂ.೧ ತಳಿಯ ಇತರೆ ಉಪತಳಿಗಳು ಸಹ ಪತ್ತೆಯಾಗಿರುವುದಾಗಿ ಮಾಹಿತಿ ನೀಡಿದೆ. ಈ ತಳಿಗಳು ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಪುಣೆಯಲ್ಲಿ ಓರ್ವ ರೋಗಿಯಲ್ಲಿ ಪತ್ತೆಯಾಗಿದೆ.

ಎಕ್ಸ್ಬಿವಿ, ಬಿಜೆ.೧ ಹಾಗೂ ಬಿಎ.೨.೭೫ ಈ ಎರಡು ಓಮಿಕ್ರಾನ್ ತಳಿಗಳ ಮರುಸಂಯೋಜಿತ ವಂಶಾವಳಿಯಾಗಿದ್ದು, ಬಹಳ ವೇಗವಾಗಿ ಹರಡುವ ತಳಿಯಾಗಿದೆ. ಇದು ಸಿಂಗಪೂರ್‌ ನಲ್ಲಿ ಇತ್ತೀಚೆಗೆ ಬಹಳ ತೊಂದರೆ ನೀಡಿತ್ತು.

ಮಹಾರಾಷ್ಟ್ರ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ತಿಳಿಸಿರುವ ಪ್ರಕಾರ ಎಕ್ಸ್ಬಿಬಿ ಬಿಎ.೨.೭೫ ಹಾಗೂ ಪತ್ತೆಯಾಗದ ಪ್ರತಿರಕ್ಷಣಾ ಗುಣಲಕ್ಷಣಗಳನ್ನು ಹೊಂದಿದೆ. ಅಂಕಿಅಂಶಗಳ ಪ್ರಕಾರ ಹೊಸ ಕೋವಿಡ್ ಪ್ರಕರಣಗಳು, ಅಕ್ಟೋಬರ್ ೩-೯ರ ಹೋಲಿಕೆಯಲ್ಲಿ ಅಕ್ಟೋಬರ್ ೧೦-೧೬ರ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಶೇ.೧೭.೭ರಷ್ಟು ಹೆಚ್ಚಾಗಿದೆ. ಈ ಹೆಚ್ಚಳ ರಾಜ್ಯದ ಥಾನೆ, ರಾಯ್‌ ಘಡ ಹಾಗೂ ಮುಂಬೈಗಳಲ್ಲಿ ಕಂಡು ಬಂದಿರುವುದಾಗಿ ಅಲ್ಲಿನ ಆರೋಗ್ಯ ಇಲಾಖೆ ಅಧಿಕೃತ ಪ್ರಕಟಣೆಯೊಂದರಲ್ಲಿ ತಿಳಿಸಿದೆ.

ಅಕ್ಟೋಬರ್ 17ರಂದು ಭಾರತದಲ್ಲಿ ಓಮಿಕ್ರಾನ್‌ ನ ಬಿಕ್ಯು.೧ ಉಪತಳಿಯ ಮೊದಲ ಪ್ರಕರಣವನ್ನು ಪುಣೆಯಲ್ಲಿ ಪತ್ತೆಯಾಯಿತು. ಈ ತಳಿಯು, ಯುನೈಟೆಡ್ ಸ್ಟೇಟ್ಸ್ ನಲ್ಲಿ ಕಂಡು ಬಂದಂತಹ ಶೇ.೬೦ರಷ್ಟು ಕೋವಿಡ್ ಪ್ರಕರಣಗಳಲ್ಲಿ ಕಂಡು ಬಂದಿದ್ದಂತಹ ಬಿಎ.೫ನಿಂದ ಬಂದಿರುವುದಾಗಿ ವರದಿಗಳು ತಿಳಿಸಿವೆ.

ಆರೋಗ್ಯ ಇಲಾಖೆಯ ಕೆಲವು ತಜ್ಞರು ಊಹಿಸಿರುವಂತೆ ಈ ಚಳಿಗಾಲದಲ್ಲಿ ಪ್ರಕರಣಗಳು ಹೆಚ್ಚಾಗಿದೆಯಂತೆ, ಅದರಲ್ಲೂ ವಿಶೇಷವಾಗಿ ಹಬ್ಬಗಳ ಮಾಸದಲ್ಲಿ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: New Omicron- subspecies -discovered – Maharashtra.