ವಿದ್ಯಾರ್ಥಿ ನವೀನ್ ಸಾವಿಗೆ ಕೇಂದ್ರದ ನಿರ್ಲಕ್ಷ್ಯವೇ ಕಾರಣ- ಶಾಸಕ ಪ್ರಿಯಾಂಕ್ ಖರ್ಗೆ.

Promotion

ಬೆಂಗಳೂರು,ಮಾರ್ಚ್,2,2022(www.justkannada.in):  ನಿನ್ನೆ ಉಕ್ರೇನ್ ನಲ್ಲಿ ರಷ್ಯಾ ದಾಳಿಗೆ ಕರ್ನಾಟಕ ಮೂಲದ ವಿದ್ಯಾರ್ಥಿ ನವೀನ್ ಬಲಿಯಾಗಿದ್ದು ಇದಕ್ಕೆ ಕೇಂದ್ರದ ನಿರ್ಲಕ್ಷ್ಯವೇ ಕಾರಣ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಭಾರತೀಯರನ್ನ ಸುರಕ್ಷಿತವಾಗಿ ಕರೆತರಬೇಕು.  ಅಲ್ಪಕೆಲಸ ಮಾಡಿ ಹೆಚ್ಚು ಪ್ರಚಾರ ಪಡೆಯೋದು ಬೇಡ.  ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಕರೆ ತನ್ನಿ ಎಂದು ತಿಳಿಸಿದರು.

ನವೀನ್ ಸಾವಿಗೆ ಕೇಂಧ್ರದ ನಿರ್ಲಕ್ಷ್ಯವೇ ಕಾರಣ. ಇದು  ರಾತ್ರಿ ಬೆಳಗಾಗೋದ್ರಲ್ಲಿ ನಡೆಯುವ ಯುದ್ದ ಅಲ್ಲ. ಬಿಜೆಪಿಯವರು ಸುಮ್ಮನೆ ಪ್ರಚಾರ ಪಡೆಯತ್ತಿದ್ದಾರೆ.  ಗಡಿಗೆ ಬನ್ನಿ ಅಂದ್ರೆ ಅವರು ಹೇಗೆ ಬರಬೇಕು.   ಆತಂಕದಲ್ಲಿರೋರ ಮುಂದೆ ಉದ್ದುದ್ದ ಭಾಷಣ ಬೇರೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.

Key words: negligence-Center-MLA-Priyank Kharge