ನೆರೆ ಪರಿಹಾರ ವರದಿ ತಿರಸ್ಕಾರ ವಿಚಾರ: ಕೇಂದ್ರಸರ್ಕಾರಕ್ಕಿಂತ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಹೆಚ್ಚು- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕೆ…

Promotion

ಮೈಸೂರು,ಅ,4,2019(www.justkannada.in): ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರಸರ್ಕಾರಕ್ಕಿಂತ  ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಹೆಚ್ಚು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ರಾಜ್ಯ ಬಿಜೆಪಿ ಸರ್ಕಾರವನ್ನ ಟೀಕಿಸಿದ್ದಾರೆ.

ಕೇಂದ್ರದಿಂದ ನೆರೆ ಪರಿಹಾರ ವರದಿ  ತಿರಸ್ಕಾರ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ  ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ರಾಜ್ಯ ಬೊಕ್ಕಸದ ಹಣವನ್ನೇ ಬಳಸಿಕೊಂಡರೆ ಸಾಕು ಸಂತ್ರಸ್ತರಿಗೆ  ನೆರವಾಗಬಹುದು. ರಾಜ್ಯದಲ್ಲಿ ಅಧಿಕಾರಿಗಳ ಹಾಗೂ ಸರ್ಕಾರದ ನಡುವೆ ಉತ್ತಮ ಹೊಂದಾಣಿಕೆ ಇಲ್ಲ. ಈ ಹಿನ್ನೆಲೆ ಪ್ರವಾಹ ಸಂತ್ರಸ್ತರ  ಜೀವನ  ಬೀದಿಗೆ ಬಂದಂತಾಗಿದೆ. ಸರ್ಕಾರಕ್ಕೆ  ರಾಜ್ಯದ ಬೊಕ್ಕವನ್ನ  ಬಳಸಿಕೊಳ್ಳೋದೇ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಈ ಬಗ್ಗೆ ಸರ್ವ ಪಕ್ಷ ಸಭೆ ಕರೆಯಿರಿ ಎಂದೆ ಅದನ್ನು ಮಾಡಲಿಲ್ಲ, ಸಭೆ ಕರೆದಿದ್ದರೆ ನಾವು ಅಗತ್ಯ ಸಲಹೆ ಸೂಚನೆಗಳನ್ನ  ನೀಡುತ್ತಿದ್ದೆವು. ಮುಂದಿನ  ಅಧಿವೇಶನದಲ್ಲಿ  ಈ ಬಗ್ಗೆಯೇ  ಹೆಚ್ಚು ಚರ್ಚೆ ಮಾಡುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

Key words: neglect -state government -central government-Former CM -HD Kumaraswamy